ವಾಟ್ಸ್ ಆ್ಯಪ್ ಈಗ ತನ್ನ ಬಳಕೆದಾರರಿಗೆ ಅಪರಿಚಿತರ ಕರೆಗಳಿಂದಾಗುವ ಕಿರಿಕಿರಿ ತಪ್ಪಿಸಲು ಹೊಸ ಫೀಚರ್ ಒಂದನ್ನು ಪರಿಚಯಿಸಿದೇ.
ಅದುವೇ “ಸೈಲೆನ್ಸ್ ಅನ್‌ನೌನ್ ಕಾಲರ್’! ವಾಟ್ಸ್‌ಆ್ಯಪ್ ಬಳಕೆದಾರನೊಬ್ಬ ತನ್ನ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇಲ್ಲದಿದ್ದರೂ ಮತ್ತೂಬ್ಬ ವಾಟ್ಸ್‌ಆ್ಯಪ್ ಬಳಕೆದಾರನಿಗೆ ಕರೆ ಮಾಡುವ ಆಯ್ಕೆ ಇದ್ದು, ಹಲವು ಬಾರಿ ಯಾರೋ ಅಪರಿಚಿತರು ಕೂಡ ಈ ರೀತಿ ಕರೆ ಮಾಡಿ, ಬಳಕೆದಾರರಿಗೆ ಕಿರಿ ಕಿರಿಯನ್ನುಂಟು ಮಾಡಿದ್ದೂ ಇದೆ. ಈ ಹಿನ್ನೆಲೆ ನಮ್ಮ ಕಾಂಟ್ಯಾಕ್ಟ್‌ನಲ್ಲಿಲ್ಲದ ಅಪರಿಚಿತರ ಕರೆಗಳನ್ನು ತಡೆಹಿಡಿಯಲು ಸಂಸ್ಥೆ ಸೈಲೆನ್ಸ್ ಅನ್ ನೌನ್ ಕಾಲರ್ ಫೀಚರ್ ಪರಿಚಯಿಸಿದೆ.
ಇದನ್ನು ಆಯ್ಕೆ ಮಾಡಿದವರಿಗೆ ಅವರ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಸೇವ್ ಇರದಂಥ ಯಾವುದೇ ಅನ್ಯ ಕರೆಗಳು ತೊಂದರೆ ನೀಡುವುದಿಲ್ಲ. ಆದಾಗ್ಯೂ, ಪರಿಚಿತರಿದ್ದು ನಂಬರ್ ಸೇವ್ ಇರದಿದ್ದರೆ ಅಂಥ ಕರೆಗಳು ತಪ್ಪಬಾರದೆಂದು ಆ್ಯಪ್ ನ ಒಳಗೆ ನೋಟಿಫಿಕೇಶನ್ ನಲ್ಲಿ ಮಾತ್ರ ಕರೆ ಬರುವುದನ್ನು ತೋರಿಸಲು ಈ ಫೀಚರ್ ಅನುಮತಿಸಿದೆ.