ಮನೆ ಅಪರಾಧ ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಒಟಿಪಿ ಪಡೆದು ವೃದ್ಧೆಗೆ 1.80 ಲಕ್ಷ ವಂಚಿಸಿದ ಸೈಬರ್ ಕಳ್ಳರು

ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಒಟಿಪಿ ಪಡೆದು ವೃದ್ಧೆಗೆ 1.80 ಲಕ್ಷ ವಂಚಿಸಿದ ಸೈಬರ್ ಕಳ್ಳರು

0

ಬೆಂಗಳೂರು: ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ  ವೃದ್ಧೆಗೆ ಕರೆ ಮಾಡಿ ಕೆವೈಸಿ ಅಪ್‌’ಡೇಟ್‌ ಮಾಡಬೇಕು ಎಂದು ನಂಬಿಸಿ ಓಟಿಪಿ ನಂಬರ್‌ ಪಡೆದ ಸೈಬರ್‌ ಕಳ್ಳರು 1.80 ಲಕ್ಷ ರೂ. ವಂಚಿಸಿದ್ದಾರೆ.

ಲ್ಯಾಂಗ್‌ ಫೋರ್ಡ್‌’ಟೌನ್‌ ಮೀರಾ (77) ವಂಚನೆಗೊಳಗಾದವರು.

ಜ.27ರಂದು ಬ್ಯಾಂಕ್‌ ಸಿಬ್ಬಂದಿಯಂತೆ ಮೀರಾ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತರು, ನಿಮ್ಮ ಬ್ಯಾಂಕ್‌ ಖಾತೆಯ ಕೆವೈಸಿ ಅಪ್‌ ಡೇಟ್‌ ಮಾಡಬೇಕಿದ್ದು, ಕಸ್ಟಮರ್‌ ಕೇರ್‌ ಗೆ ಕರೆ ಮಾಡಿ ಎಂದು ನಂಬರ್‌ ನೀಡಿದ್ದರು.

ಅದರಂತೆ ಮೀರಾ ಅಪರಿಚಿತರು ಕೊಟ್ಟ ನಂಬರ್‌ ಗೆ ಕರೆ ಮಾಡಿ ವಿಚಾರಿಸಿದಾಗ ನಿಮ್ಮ ಮೊಬೈಲ್‌ಗೆ ಬಂದಿರುವ ಓಟಿಪಿ ನಂಬರ್‌ ಹೇಳುವಂತೆ ಸೂಚಿಸಿದ್ದರು. ಮೀರಾ ಓಟಿಪಿ ನಂಬರ್‌ ಹೇಳಿದ್ದರು. ಇದಾದ ಕೆಲ ಹೊತ್ತಿನಲ್ಲೇ ಮೀರಾ ಬ್ಯಾಂಕ್‌ ಖಾತೆಯಿಂದ 1.80 ಲಕ್ಷ ರೂ. ಕಡಿತಗೊಂಡಿತ್ತು.

ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್‌ ಕಳ್ಳರ ಕೈ ಚಳಕ ಎಂಬುದು ಬೆಳಕಿಗೆ ಬಂದಿತ್ತು.