ಮನೆ ಅಪರಾಧ ಹೋಟೆಲ್ ಕಿಚನ್ ನಲ್ಲಿ ಸಿಲಿಂಡರ್ ಸ್ಪೋಟ: 10 ಮಂದಿಗೆ ಗಾಯ, ಐವರ ಸ್ಥಿತಿ ಗಂಭೀರ

ಹೋಟೆಲ್ ಕಿಚನ್ ನಲ್ಲಿ ಸಿಲಿಂಡರ್ ಸ್ಪೋಟ: 10 ಮಂದಿಗೆ ಗಾಯ, ಐವರ ಸ್ಥಿತಿ ಗಂಭೀರ

0

ಕಲಬುರಗಿ: ನಗರದ ಹೋಟೆಲೊಂದರಲ್ಲಿ ಕಿಚನ್ ನಲ್ಲಿ ಸಿಲಿಂಡರ್ ಸ್ಪೋಟಗೊಂಡು ಹತ್ತು ಮಂದಿ ಗಾಯಗೊಂಡ ಘಟನೆ ಶುಕ್ರವಾರ (ಜೂನ್ 21) ಬೆಳಂಬೆಳಿಗ್ಗೆ ನಡೆದಿದೆ.

Join Our Whatsapp Group

ನಗರದ ಶರಣಬಸವೇಶ್ವರ ಕೆರೆ ಹತ್ತಿರದ ಸಪ್ತಗಿರಿ ಹೋಟೆಲ್ ನಲ್ಲಿ ಸಿಲೆಂಡರ್ ಸ್ಪೋಟವಾಗಿದ್ದು, ಇದರಲ್ಲಿ ಹತ್ತಕ್ಕೂ ಜನ ಗಾಯಗೊಂಡಿದ್ದಾರೆ. ಇವರಲ್ಲಿ ಐದು ಜನರ ಸ್ಥಿತಿ ಚಿಂತಾಜನಕವಾಗಿದೆ.

ಸಿಲಿಂಡರ್ ಸ್ಫೋಟದಿಂದ ಹೋಟೆಲ್ ಗೋಡೆಗೂ ಧಕ್ಕೆಯಾಗಿದೆಯಲ್ಲದೆ ಹೋಟೆಲ್ ನ ಕಿಟಕಿಗಳು ಹಾನಿಗೊಳಗಾಗಿವೆ. ಸ್ಫೋಟದ ಭೀಕರತೆ ಎಷ್ಟಿತ್ತೆಂದರೆ ಹೋಟೆಲ್ ಪಕ್ಕದ ಮನೆಗಳ ಕಿಟಕಿಗಳು ಸಹ ಹಾನಿಗೊಳಪಟ್ಟಿವೆ.

ಘಟನೆ ಅರಿಯುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗಾಯಾಳುಗಳನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸಿಲೆಂಡರ್ ಬ್ಲಾಸ್ಟ್ ಪ್ರಕರಣದಲ್ಲಿ ಹರಿಯಾಣ ಮೂಲದ ಸತ್ಯವಾನ್ ಶರ್ಮ (55), ಯುಪಿ ಮೂಲದ ರಾಕೇಶ್ (45), ಮಹೇಶ್ ಕುದುಮುಡು (40), ವಿಠ್ಠಲ್ ಕೊಡಲ್ (42), ಗುರುಮೂರ್ತಿ, ಅಪ್ಪರಾಯ್, ಮಲ್ಲಿನಾಥ್, ಮಹೇಶ್, ಲಕ್ಷ್ಮಣ್,  ರಾಕೇಶ್ ಗಾಯಗೊಂಡಿದ್ದಾರೆ.‌