ಮನೆ ದೇವರನಾಮ ಲಕ್ಷ್ಮೀ ದೇವಿಯನ್ನು ಈ ಮಂತ್ರಗಳಿಂದ ಆರಾಧಿಸಿ

ಲಕ್ಷ್ಮೀ ದೇವಿಯನ್ನು ಈ ಮಂತ್ರಗಳಿಂದ ಆರಾಧಿಸಿ

0

ಲಕ್ಷ್ಮಿಯನ್ನು ಯಾವೆಲ್ಲಾ ಮಂತ್ರಗಳ ಪಠಣೆಯಿಂದ ಆರಾಧಿಸಬೇಕು ಗೊತ್ತಾ..? ಲಕ್ಷ್ಮಿ ಮಂತ್ರಗಳೊಂದಿಗೆ ಲಕ್ಷ್ಮಿಯನ್ನು ಆರಾಧಿಸಿದರೆ ಸಿರಿ, ಸಂಪತ್ತು, ಅಷ್ಟೈಶ್ವರ್ಯ ನಿಮ್ಮದಾಗುತ್ತದೆ.

ಲಕ್ಷ್ಮಿ ಮಂತ್ರ:

|| ಓಂ ಹ್ರಿಂಗ್‌ ಶ್ರಿಂಗ್‌ ಕ್ರೆಂಗ್‌ ಶ್ರಿಂಗ್‌ ಕ್ಲೆಂಗ್‌ ಕ್ಲಿಂಗ್‌ ಶ್ರಿಂಗ್‌ ಮಹಾಲಕ್ಷ್ಮಿ ಮಾಂ ಗ್ರೀಃ ಧನಂ ಪುರ ಪೂರ್ಯ್‌ ಚಿಂತಾಯೈ ಡೋರೆ ಡೋರ್ಯ್‌ ಸ್ವಾಹಃ ||

ಈ ಮಂತ್ರವನ್ನು ಹೊರಗಡೆ ಹೋಗುವಾಗ, ಕೆಲಸ ಮಾಡುವ ಸ್ಥಳಕ್ಕೆ ತೆರಳುವ ಮೊದಲು ಅಥವಾ ಯಾವುದೇ ವ್ಯವಹಾರದ ಮಾತುಕತೆಗಳಿಗೆ ಹೋಗುವ ಮೊದಲು ಪಠಿಸಬೇಕು. ಈ ಮಂತ್ರವು ನಿಮ್ಮ ಚಿಂತೆಯನ್ನು ತೆಗೆದು ಹಾಕುತ್ತದೆ ಹಾಗೂ ಸಂಪತ್ತನ್ನು ಹೆಚ್ಚಿಸುತ್ತದೆ.

ಲಕ್ಷ್ಮಿ ಮಂತ್ರ:

|| ಓಂ ಶ್ರೀ ಮಹಾಲಕ್ಷ್ಮೈಚಾ ವಿದ್ಮಹೇ ವಿಷ್ಣು ಪತ್ನಯೇ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್‌ ಓಂ ||

ವಿಷ್ಣುವಿನ ಪತ್ನಿಯಾದ ಶ್ರೀ ಲಕ್ಷ್ಮಿ ದೇವಿಯ ನಾನು ನಿಮಗೆ ಶಿರಸಾ ಬಾಗಿ ನಮಸ್ಕರಿಸುತ್ತೇನೆ. ಬುದ್ದಿವಂತಿಕೆ , ಸಂಪತ್ತು ಮತ್ತು ಸಮೃದ್ಧಿಯನ್ನು ಆಶೀರ್ವಾದಿಸಿ ಎನ್ನುವುದೇ ಈ ಮಂತ್ರದ ಅರ್ಥವಾಗಿದೆ.

ಮಹಾಲಕ್ಷ್ಮಿ ಮಂತ್ರ:
|| ಓಂ ಸರ್ವಾಬಾಧಾ ವಿನಿರ್ಮುಕ್ತೋ ಧನಧಾನ್ಯಾಹ ಸುತಾನ್ವಿತಾ | ಮನುಷ್ಯೋ ಮತ್ಪ್ರಸಾದೇನ್‌ ನ ಸನ್ಶಯ ಓಂ ||

ತಾಯಿ ಲಕ್ಷ್ಮಿ ದೇವಿಯ ಬಳಿ ಎಲ್ಲಾ ಸಮಸ್ಯೆಗಳಿಂದ ನನ್ನನ್ನು ಮುಕ್ತಗೊಳಿಸು. ಸಾಲದ ಭಾದೆಯಿಂದ ಕೂಡ ನನ್ನನ್ನು ಮುಕ್ತಗೊಳಿಸಿ ಧನವನ್ನು ಅಂದರೆ ಹಣವನ್ನು ಕರುಣಿಸು ಎಂದು ಬೇಡುವುದಾಗಿದೆ.