ಮನೆ ಅಪರಾಧ ಮನೆ ಬಳಿ ಶೂನಲ್ಲಿಡುವ ಕೀ ಬಳಸಿ ಕನ್ನ ಹಾಕುತ್ತಿದ್ದ ಖತರ್ನಾಕ್‌ ಮಹಿಳೆ ಸೆರೆ

ಮನೆ ಬಳಿ ಶೂನಲ್ಲಿಡುವ ಕೀ ಬಳಸಿ ಕನ್ನ ಹಾಕುತ್ತಿದ್ದ ಖತರ್ನಾಕ್‌ ಮಹಿಳೆ ಸೆರೆ

0

ಬೆಂಗಳೂರು: ಮನೆ ಹೊರಗಡೆಯ ಶೂ ರ್ಯಾಕ್‌ ಹಾಗೂ ಶೂನಲ್ಲಿ ಇಡುವ ಕೀ ಬಳಸಿ ಮನೆ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಹೆಣ್ಣೂರು ನಿವಾಸಿ ಜಯಂತಿ (35) ಬಂಧಿತ ಆರೋಪಿ. ಈಕೆಯಿಂದ 7.80 ಲಕ್ಷ ರೂ. ಮೌಲ್ಯದ 110 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಈಕೆಯ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ 31 ಕಳ್ಳತನ ಪ್ರಕರಣಗಳು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿಗೆ ಮದುವೆಯಾಗಿದ್ದು, ನಾಲ್ವರು ಹೆಣ್ಣು ಮಕ್ಕಳು ಇದ್ದಾರೆ. ಪತಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದಾನೆ. ಈಕೆ ಮನೆ ಕೆಲಸಕ್ಕೆ ಹೋಗುವ ನೆಪದಲ್ಲಿ ಅಕ್ಕ-ಪಕ್ಕದ ಮನೆಗಳಲ್ಲಿ ಶೂಗಳಲ್ಲಿ ಮತ್ತು ಶೂ ರ್ಯಾಕ್‌ಗಳಲ್ಲಿ ಕೀ ಇಡುವುದನ್ನು ಗಮನಿಸುತ್ತಿದ್ದಳು. ಬಳಿಕ ಅದೇ ಕೀ ಬಳಸಿ ಮನೆ ಕಳ್ಳತನ ಮಾಡುತ್ತಿದ್ದಳು. ಇತ್ತೀಚೆಗೆ ಠಾಣೆ ವ್ಯಾಪ್ತಿಯಲ್ಲಿ ದೂರುದಾರು ಮನೆ ಬೀಗ ಹಾಕಿಕೊಂಡು ಕೀಯನ್ನು ಕಿಟಕಿ ಪಕ್ಕದಲ್ಲಿ ಇಟ್ಟಿದ್ದರು. ಆ ಕೀ ಬಳಸಿ ಮನೆಯಲ್ಲಿದ್ದ 450 ಗ್ರಾಂ ಚಿನ್ನಾಭರಣ, 1300 ರೂ. ನಗದು ದೋಚಿ ಪರಾರಿಯಾಗಿದ್ದಳು ಎಂದು ಪೊಲೀಸರು ಹೇಳಿದರು.

31 ಪ್ರಕರಣ ದಾಖಲು: ಆರೋಪಿ ಜಯಂತಿ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 31 ಕಳ್ಳತನ ಪ್ರಕರಣಗಳು ದಾಖಲಾಗಿರುವುದು ಗೊತ್ತಾಗಿದೆ. ಈ ಹಿಂದೆ ಭಾರತಿನಗರದಲ್ಲಿ ವಾಸವಾಗಿದ್ದ ಜಯಂತಿ, ಅಲ್ಲಿಯೂ ಹತ್ತಾರು ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾಳೆ. ಕೆಲ ತಿಂಗಳ ಹಿಂದಷ್ಟೇ ಹೆಣ್ಣೂರಿಗೆ ಕುಟುಂಬ ಸಮೇತ ಸ್ಥಳಾಂತರಗೊಂಡಿದ್ದಾಳೆ ಎಂದು ಪೊಲೀಸರು ಹೇಳಿದರು.