ಮನೆ ರಾಜಕೀಯ ದೇವರ ಮೇಲಿನ ನಂಬಿಕೆಯೆ ಬದುಕಿನ ಆಧಾರ: ಸಚಿವ ಕೆ.ಗೋಪಾಲಯ್ಯ

ದೇವರ ಮೇಲಿನ ನಂಬಿಕೆಯೆ ಬದುಕಿನ ಆಧಾರ: ಸಚಿವ ಕೆ.ಗೋಪಾಲಯ್ಯ

0

ಬೆಂಗಳೂರು:  ಮಹಾಲಕ್ಷ್ಮಿ‌ ಲೇ‌ ಔಟ್  ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಲಾ‌ ನಗರದ ಮುಖ್ಯ ರಸ್ತೆಯಲ್ಲಿರುವ ಜಯಮಾರುತಿ ದೇವಸ್ಥಾನದಲ್ಲಿಂದು ಹಮ್ಮಿಕೊಂಡಿದ್ದ ಸೀತಾರಾಮ ಕಲ್ಯಾಣೋತ್ಸವ ಹಾಗು ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರದಲ್ಲಿ ಸ್ಥಳೀಯ ಶಾಸಕರೂ ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವೆಲ್ಲ ದೇವರನ್ನು ನಂಬಿದವರು, ನಮ್ಮ‌ಈ ನಂಬಿಕೆಗಳೆ ನಮ್ಮನ್ನು ದೀರ್ಘ ಕಾಲ ಉತ್ತಮ ಜೀವನ ಮತ್ತು ಒಳ್ಳೆಯ ನಡೆ ನುಡಿಗೆ ಕಾರಣವಾಗುತ್ತವೆ ಎಂದರು.
ಮಾರುತಿ ನಗರದ ಡಾ.ರಾಜ್ ಮಾರುತಿ  ಕನ್ನಡ ಯುವಕರ ಸಂಘ ಮತ್ತು ಅಣ್ಣಮ್ಮ ದೇವಿ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ  22 ನೇ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ 11 ನೇ ವರ್ಷದ  ಅಣ್ಣಮ್ಮ ದೇವಿ  ವಾರ್ಷಿಕೋತ್ಸವ ಸಮಾರಂಭದಲ್ಲಿ ಸಚಿವರು  ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಉಪಮೇಯರ್ ಶ್ರೀಮತಿ ಹೇಮಲತಾ ಕೆ.ಗೋಪಾಲಯ್ಯ, ಬಿಜೆಪಿ ಮುಖಂಡರಾದ ಜಯಸಿಂಹ,ನಿಸರ್ಗ ಜಗದೀಶ್ ಹಾಗೂ ಸ್ಥಳಿಯ ಮುಖಂಡರು ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹಿಂದಿನ ಲೇಖನದಾಖಲೆ ಬಿಡುಗಡೆ ಮಾಡಲು ಕುಮಾರಸ್ವಾಮಿಗೆ ಸವಾಲು ಹಾಕಿದ ಸಿ.ಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ
ಮುಂದಿನ ಲೇಖನಪುಣ್ಯಕೋಟಿ ದತ್ತು ಯೋಜನೆ ಆರಂಭ: ಹುಟ್ಟುಹಬ್ಬಕ್ಕೆ 11 ಗೋವು ದತ್ತು ಪಡೆದ ಸಿಎಂ ಬೊಮ್ಮಾಯಿ