ಎಥನಾಲ್ ದ್ರಾವಣ ಉಪಯೋಗಿಸಿ ತಾರೆಕಾಯಿಯಿಂದ ತಯಾರಿಸಿದ ಸತ್ವದಲ್ಲಿ ಕೆಲವು ರಾಸಾಯನಿಕ ಘಟಕಗಳಿವೆ. ಘಟಕಗಳಿವೆ ಈ ರಾಸಾಯನಿಕ ಘಟಕಗಳಿಗೆ ವೈರಾಣು ನಾಶಕ ಗುಣವಿದೆಯೆಂದು ವರದಿಯಾಗಿದೆ.
ಬ್ಯಾಕ್ಟೀರಿಯ ನಾಶಕ ಗುಣ :
ಹಲವು ಬಗೆಯ ಬ್ಯಾಕ್ಟೀರಿಯಗಳನ್ನು ಒಳಗೊಂಡಂತೆ ವಿವಿಧ ಬಗೆಯ ಔಷಧಿಗಳಿಗೆ ಪ್ರತಿರೋಧವನ್ನು ಬೆಳೆಸಿಕೊಂಡಿರುವ ಬ್ಯಾಕ್ಟೀರಿಯಗಳನ್ನು ನಾಶಪಡಿಸುವ ಸಾಮರ್ಥ್ಯ ನೀರು ಮತ್ತು ಮೆಥನಾಲ್ ದ್ರಾವಣ ಉಪಯೋಗಿಸಿ ತಾರೆಕಾಯಿಯಿಂದ ತಯಾರಿಸಿದ ಸತ್ವಕ್ಕೆ ಇದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ತಿಳಿದು ಬಂದಿದೆ .
ಉದರಕ್ಕೆ ಸಂಬಂಧಿಸಿದ ಕಾಯಿಲೆಗಳನ್ನೊಳಗೊಂಡಂತೆ ಹಲವಾರು ಮಾರಕ ಕಾಯಿಲೆಗಳಿಗೆ ಕಾರಣವಾದ ಬ್ಯಾಕ್ಟೀರಿಯಗಳನ್ನು ನಾಶಪಡಿಸುವ ಸಾಮರ್ಥ್ಯ ನೀರು ಮತ್ತು ಮಧ್ಯಸಾರ ಉಪಯೋಗಿಸಿ ತಾರೆಕಾಯಿಯಿಂದ ತಯಾರಿಸಿದ ಸತ್ವಕ್ಕೆ ಇದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ.ಮತ್ತೊಂದು ಪ್ರಯೋಗ ಶಾಲೆಯಲ್ಲಿ ಇಲಿಗಳಿಗೆ ತಾರೆಕಾಯಿಯ ಸತ್ವವನ್ನು ಸೇವಿಸಲು ಕೊಟ್ಟು ಸಜ್ಜುಗೊಳಿಸಲಾಯಿತು. ಇಂತಹ ಇಲಿಗಳಿಗೆ ಬ್ಯಾಕ್ಟೀರಿಯದ ಸೋಂಕು ಉಂಟಾಗುವಂತೆ ಮಾಡಲಾಯಿತು. ನಂತರ ಇಲಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ತಾರೆಕಾಯಿಯ ತತ್ವ ಸೇವಿಸಿದುದರ ಪರಿಣಾಮವಾಗಿ ಇಲಿಗಳಲ್ಲಿ ಬ್ಯಾಕ್ಟೀರಿಯಾದ ಸೋಂಕು ಉಂಟಾಗಲಿಲ್ಲವೆಂದು ವರದಿಯಾಗಿದೆ.
ಉಸಿರಾಟಕ್ಕೆ ಸಂಬಂಧಿಸಿದ ಸೋಂಕಿಗೆ ಕಾರಣವಾದ ಬ್ಯಾಕ್ಟೀರಿಯವನ್ನು ನಾಶಪಡಿಸುವ ಗುಣ ಮೆಥನಾಲ್ ದ್ರಾವಣ ಉಪಯೋಗಿಸಿ ತಾರೆಕಾಯಿಯಿಂದ ತಯಾರಿಸಿದ ಸತ್ವಕ್ಕೆ ಇದೆ ಎಂದು ವರದಿಯಾಗಿದೆ.
ಶಿಲೀಂಧ್ರ ನಾಶಕ ಗುಣ :
ಕ್ರಿಪ್ಟೊಕಾಕೊಸಿನ್ ಎಂಬುದು ಕ್ರಿಪ್ಟೊಕಾಕಸ್ ನಿಯೊಫಾರ್ಮಾನ್ಸ್ ಎಂಬ ಸಿಲಿಂಧ್ರ ಉಂಟು ಮಾಡುವ ರೋಗ,ಈ ಸಿಲೀಂಧ್ರ ಕಾಡಿನ ಸಾವಯವ ಮಣ್ಣು, ತಿಪ್ಪೇಗುಂಡಿ ಮತ್ತು ಕೊಳೆಯುತ್ತಿರುವ ಮರದ ಪೊಟರೆಯಲ್ಲಿರುತ್ತದೆ.ಈ ಶಿಲೀಂಧ್ರ ಸಾಮಾನ್ಯವಾಗಿ,ರೋಗನಿರೋಧಕ ಶಕ್ತಿಯಿಲ್ಲದವರು ಅಂಗಾಂಗ ಕಸಿ ಮಾಡಿಸಿ ಕೊಂಡವರು, ರೋಗ ನಿರೋಧಕ ಶಕ್ತಿಯನ್ನು ಶಕ್ತಿಯನ್ನು ಕಡಿಮೆ ಮಾಡುವಂತಹ ಔಷಧಯನ್ನು ಸೇವಿಸುವವರು ಮತ್ತು HIV AIDS ರೋಗಿಗಳಿಗೆ ಬಹುಬೇಗ ರೋಗವನ್ನುಂಟು ಮಾಡುತ್ತದೆ. ಆರೋಗ್ಯವಂತರಿಗೆ ಈ ರೋಗ ಸಾಮಾನ್ಯವಾಗಿ ಉಂಟಾಗುವುದಿಲ್ಲ.ಗಾಳಿಯ ಮೂಲಕ ತೇಲಿಬಂದ ಸ್ಪೋರ್ ಕಣಗಳು ಮೂಗಿನ ಮೂಲಕ ಶ್ವಾಸಕೋಶವನ್ನು ಸೇರಿ ಕೆಮ್ಮು, ಎದೆಯುರಿ, ಉಸಿರಾಟದ ತೊಂದರೆ ಮತ್ತು ನ್ಯೂಮೋನಿಯ ದಂತಹ ರೋಗ ಲಕ್ಷಣಗಳನ್ನುಂಟು ಮಾಡುತ್ತದೆ.ಈ ಶಿಲಿಂಧ್ರ ಮೆದುಳಿಗೆ ಸೋಂಕು ಉಂಟು ಮಾಡಿದರೆ ತಲೆನೋವು, ಕುತ್ತಿಗೆ ನೋವು,ವಾಕರಿಕೆ ವಾಂತಿ ಮುಂತಾದ ರೋಗದ ಲಕ್ಷಣಗಳು ಕಂಡುಬರುತ್ತವೆ. ಈ ಶಿಲೀಂಧ್ರ ಕೆಲವೊಮ್ಮೆ ಚರ್ಮರೋಗವನ್ನು ಸಹ ಉಂಟುಮಾಡುತ್ತದೆ ರಕ್ತ ಪರಿಚಯ ಮೂಲಕ ಈ ಶಿಲೀಂದ್ರವನ್ನು ಗುರುತಿಸಬಹುದು.
ಇಂತಹ ಮಾರಕ ಕಾಯಿಲೆಗೆ ಕಾರಣವಾದ ಈ ಶಿಲೀಂದ್ರವನ್ನು ನಾಶಪಡಿಸುವ ಸಾಮರ್ಥ್ಯ, ಎಥನಾಲ್ ದ್ರಾವಣ ಉಪಯೋಗಿಸಿ ತಾರೆಕಾಯಿಯ ಸತ್ವಕ್ಕೆ ಇದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ.
ಔಷಧಿ ಉಪಯೋಗಗಳು
ಉಪಯೋಗಿಸುವ ಭಾಗ : ಕಾಯಿ
ಚೂರ್ಣದ ಪ್ರಮಾಣ ದಿನಕ್ಕೆ : 3-6 ಗ್ರಾಂ
ಅನುಪಾನ : ನೀರು ಮತ್ತು ಜೇನುತುಪ್ಪ
1. ಪೂರ್ಣದಿಂದ ಪ್ರತಿನಿತ್ಯ ಹಲ್ಲುಜ್ಜುವುದರಿಂದ ಅಥವಾ ಪ್ರತಿನಿತ್ಯ ಒಂದು ಚಮಚ ಚೂರ್ಣವನ್ನು ಅರ್ಧಾ ಲೋಟ ನೀರಿಗೆ ಮಿಶ್ರಣ ಮಾಡಿ ಬಾಯಿ ಮುಕ್ಕಳಿಸುವ ಅಭ್ಯಾಸ ಬೆಳೆಸಿಕೊಂಡರೆ ಹಲ್ಲು ಹುಳುಕಾಗುವುದಿ ವಸಡು ಆರೋಗ್ಯವಾಗಿರುತ್ತದೆ.
2. ಹರಿತವಾದ ಆಯುಧದಿಂದ ಉಂಟಾದ ಗಾಯ ಅಥವಾ ಇತರ ಕಾರಣಗಳಿಂದ ಉಂಟಾದ ಗಾಯಾ ಮೇಲೆ,ತಾರೆಕಾಯಿಯ ಚೂರ್ಣವನ್ನು ನೀರಿನಲ್ಲಿ ಕಲಸಿ ಗಾಯದ ಮೇಲೆ ಮುಲಾಮಿನಂತೆ ಲೇಪಿಸಬೇಕು.ಈ ಚಿಕಿತ್ಸೆಯನ್ನು ಗಾಯ ವಾಸಿಯಾಗುವವರೆಗೂ ಮುಂದುವರಿಸಬೇಕು.
3. ಚೂರ್ಣವನ್ನು ನೀರಿನಲ್ಲಿ ಕಲಸಿ ಕೂದಲಿಗೆ ಹಚ್ಚಿ ಸ್ನಾನ ಮಾಡುವುದರಿಂದ ತಲೆಯೂ ಹೊಟ್ಟು ಕಡಿಮೆಯಾಗುತ್ತದೆ ಮತ್ತು ಕೂದಲು ಚೆನ್ನಾಗಿ ಬೆಳೆಯುತ್ತಿದೆ. ವಾರದಲ್ಲಿ ಒಂದು ದಿನ ಈ ಚಿಕಿತ್ಸೆಯನ್ನು ಕೈಗೊಳ್ಳುವುದು ಒಳ್ಳೆಯದು.4. ಬಿಸಿಲಿನಿಂದ ಮುಖ ಕಪ್ಪಾದಾಗ, ಎರಡು ಚಮಚ ತಾರೆಕಾಯಿಯ ಚೂರ್ಣಕ್ಕೆ ಸೌತೆಕಾಯಿ ಸರ ಸೇರಿಸಿ ಕಲಸಿ ಮುಖಕ್ಕೆ ಲೇಪಿಸಬೇಕು. ಲೇಪನ ಒಣಗಿದ ನಂತರ ಮುಖ ತೊಳೆದು ಕೊಂಡರೆ ಮುಖ ಕಾಂತಿಯುಕ್ತವಾಗಿರುತ್ತದೆ.ಈ ಅಭ್ಯಾಸವನ್ನು ವಾರಕ್ಕೆ ಒಂದು ಬಾರಿಯಂತೆ ಕೆಲವು ತಿಂಗಳು ಮುಂದುವರಿಸಿದರೆ ಚಿಬ್ಬು ಮತ್ತು ಮೊಡವೆಗಳು ನಿವಾರಣೆಯಾಗುತ್ತವೆ.
ನಿಯಮಿತವಾಗಿ ಚೂರ್ಣ ಸೇವಿಸು ವುದರಿಂದಾಗುವ ಉಪಯೋಗಗಳು
5. ರೋಗ ನಿರೋಧಕ ಶಕ್ತಿಯುಂಟಾಗುತ್ತದೆ.
6. ಬೊಜ್ಜು ಬೆಳೆಯುವುದಿಲ್ಲ, ದೇಹದ ತೂಕ ಕಡಿಮೆಯಾಗುತ್ತದೆ.
7. ಮಾನಸಿಕ ಒತ್ತಡ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ.
8. ಮರೆವಿನ ಕಾಯಿಲೆಯುಂಟಾಗುವ ಸಂಭವ ಕಡಿಮೆ.
9. ಶೀತ ಮತ್ತು ಕೆಮ್ಮು ಕಡಿಮೆಯಾಗುತ್ತದೆ.
10. ಮಲಬದ್ಧತೆ ನಿವಾರಣೆಯಾಗುತ್ತದೆ.
11. ಕಣ್ಣಿಗೆ ಸಂಬಂಧಿಸಿದ ರೋಗಗಳು ವಾಸಿಯಾಗುತ್ತದೆ.
12. ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತದೆ ಮತ್ತು ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ.
13. ಜಂತುಹುಳು ನಿವಾರಣೆಯಾಗುತ್ತದೆ.