ಮನೆ ಆರೋಗ್ಯ ತಾರೆಕಾಯಿ

ತಾರೆಕಾಯಿ

0

ಪರಿಚಯ :

      ತಾರೆಕಾಯಿ ಮರ ಪೂಜೆಯ ಮರಗಳಲ್ಲಿ ಒಂದು ಶನೇಶ್ವರ ನಾಯಿ ಮರದಲ್ಲಿ ನಿಲ್ಲಿಸಿರುತ್ತಾನೆ ಎಂಬ ನಂಬಿಕೆ ಇರಲಿ ಕಾರಣದಿಂದ ಈ ಮರವನ್ನು ಶನೇಶ್ವರ ದೇವಾಲಯದ ಮುಂಭಾಗದಲ್ಲಿ ಬೆಳೆಸುತ್ತಾರೆ ಮತ್ತು ಪೂಜಿಸುತ್ತಾರೆ ಈ ಕಾರಣದಿಂದ ಈ ಮರವನ್ನು ಕಡಿಯುವುದಿಲ್ಲ ಮತ್ತು ಮರವನ್ನು ಯಾವುದೇ ಬಗೆಯ ಪೀಠೋಪಕರಣಗಳ ತಯಾರಿಕೆಗೆ ಉಪಯೋಗಿಸುವುದಿಲ್ಲ. ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿ ಈ ಮರವನ್ನು ಭೂತ ರಾಕ್ಷಸರ ಆವಾಸ ಸ್ಥಾನ ಎಂದು ನಂಬುತ್ತಾರೆ ಮತ್ತು ಮರದಡಿಯಲ್ಲಿ ಕುಳಿತುಕೊಳ್ಳುವುದಿಲ್ಲ ಹಾಗೂ ಮಲಗುವುದಿಲ್ಲ.

     ಈ ಮರಕ್ಕೆ, ಕಾಯಿಲೆಯುಂಟಾಗುವ ಭಯವನ್ನು ಹೋಗಲಾಡಿಸುವ ಗುಣವಿದೆಯೆಂಬ ಕಾರಣಕ್ಕೆ ವಿಭೀತಕ ಎಂಬ ಸಂಸ್ಕೃತದ ಹೆಸರಿದೆ.ಈ ಮರದ ಗುಣ ವಿಶೇಣಗಳನ್ನು ತಿಳಿಸುವ ಹಲವಾರು ಹೆಸರುಗಳಿವೆ ಭೂತವೃಕ್ಷ ( ಭೂತಗಳ ವಾಸಸ್ಥಾನ ಎಂಬ ಕಾರಣದಿಂದ) ಕಾಳಿದೃಮ ( ತೊಗಟೆಯ ಬಣ್ಣ ಕಪ್ಪಾಗಿರುವುದರಿಂದ), ಕರ್ಸಫಲ (ಅಳತೆ ಮಾಪನವಾಗಿ ಉಪಯೋಗಿಸುವುದರಿಂದ ಕರ್ಸಂ ಎಂದರೆ 1 1/2 ತೋ;10-12 ಗ್ರಾಂ).

       ತಾರೆಕಾಯಿ ಮರದ ಎಲೆಗಳು ಕಾಂಡದ ತುದಿಯಲ್ಲಿ ಗುಂಪಾಗಿರುವುದರಿಂದ ಟರ್ಮಿನಾಲಿಯ ಎಂಬ ಜಾತಿ ಸೂಚಕ ಹೆಸರನ್ನು ನಾಮಕರಣ ಮಾಡಿದೆ. ಒಂದು ಅಭಿಪ್ರಾಯದ ಪ್ರಕಾರ, ತಾರೆಕಾಯಿ ಮರದ ಅರಬಿಕ್ ಹೆಸರನ್ನು ಲ್ಯಾಟಿನೀಕರಿಸಿ ಬೆಲ್ಲಿರಿಕ ಎಂಬ ಪ್ರಭೇದ ಸೂಚಕ ಹೆಸರನ್ನು ಇಟ್ಟಿದೆ. ಬೆಲ್ಲಿರಿಕ ಪದವನ್ನು ವಿವಿಧ ಮಾದರಿಯಲ್ಲಿ ಸಂಶೋಧನಾ  ಪ್ರಬಂಧಗಳಲ್ಲಿ ಉಲ್ಲೇಖವಾಗಿದೆ ಆದರೆ ತಾಂತ್ರಿಕವಾಗಿ ನಾಲ್ಕನೆಯದು ಸರಿಯಾದ ಪದ.

      ತಾರೆಕಾಯಿ ಮರ ಬೇಸಿಗೆಯಲ್ಲಿ ಎಲೆಯುದುರುವ ಮೈದಾನ ಸೀಮೆಯ ಮತ್ತು ಬೇಸಿಗೆಯಲ್ಲಿರುವ ಎಲೆಯುದುರುವ ಮಲೆನಾಡಿನ ಸಸ್ಯಾ ವರ್ಣದಲ್ಲಿ ಕಂಡುಬರುತ್ತದೆ. ವಿಶೇಷವಾಗಿ ಈ ಮರವನ್ನು ಶನೇಶ್ವರ ದೇವಾಲಯದ ಮುಂಭಾಗದಲ್ಲಿ ಬೆಳೆಸುತ್ತಾರೆ.

       ತಾರೆಕಾಯಿ ಮರ ಒಂದು  ಪರ್ಣಪಾತಿಮರ ಬೃಹದ್ದಾ ಕಾರವಾಗಿ ಬೆಳೆಯುತ್ತದೆ.ಎತ್ತರ 10 -30 ಮೀಟರ್. ತೊಗಟೆಯ  ಬಣ್ಣ ಕಪ್ಪು ಮಿಶ್ರಿತ ಬೂದು ಬಣ್ಣ.ತೊಗಟೆಯ ಮೇಲೆ ಉದ್ದನೆಯ ಸೀಳುಗಳಿವೆ. ಸರಳವಾದ ಎಲೆಗಳು ಅಭಿಮುಖವಾಗಿ, ಇಲ್ಲವೇ ಪರ್ಯಾಯವಾಗಿ ಅಥವಾ ಸುತ್ತು ರೀತಿಯಲ್ಲಿ ಕಾಂಡದ ತುದಿಯಲ್ಲಿ ಗುಂಪಾಗಿರುತ್ತವೆ. ಎಲೆಗೆ  ಉದ್ದವಾದ ತೊಟ್ಟಿದೆ.ತೊಟ್ಟಿನ ಉದ್ದ 4-7cm ಎಲೆ ಮತ್ತು ಎಲೆಯ ತೊಟ್ಟು ಸೇರುವ ಭಾಗದಲ್ಲಿ ಎರಡು ಗ್ರಂಥಿಗಳಿವೆ. ಎಲೆ ಅಂಡಾಕಾರವಾಗಿದೆ, ಎಲೆಯ ಉದ್ದ 10 -20 ಸೆಂಟಿಮೀಟರ್. ಅಗಲ 6-7 ಸೆಂಟಿಮೀಟರ್ ಎಳೆಯ ಬುಡ ಮತ್ತು ತುದಿ  ಸಾಮಾನ್ಯವಾಗಿ ಗುಂಡಾಗಿರುತ್ತದೆ ಕೆಲವೊಮ್ಮೆ ಚೂಪಾಗಿರುತ್ತದೆ. ಎದೆಯ ಹಂಚು ಸಮವಾಗಿದೆ.ಎಲೆಯ ಎರಡು ಬದಿಯಲ್ಲಿ ಸೂಕ್ಷ್ಮ ತುಪ್ಪಳವಿದೆ.ಚಿಗುರೆಲೆಯ ಬಣ್ಣ ತಿಳಿಗೆಂಪು.ಎಲೆಗಳು ಚಳಿಗಾಲದಲ್ಲಿ ಉದುರುತ್ತದೆ, ಸ್ಪೈಕ್ ಮಾದರಿಯ ಪುಷ್ಪಮಂಜರಿ ಎಲೆಯ ಕಂಕುಳಲ್ಲಿರುತ್ತವೆ.ಪುಷ್ಪ ಮಂಜರಿ ಎಲೆಗಿಂತ ಚಿಕ್ಕದಾಗಿದೆ. ಸಾಮಾನ್ಯವಾಗಿ ಎಲೆ ಚಿಗುರುವುದರ ಜೊತೆಗೆ ಪುಷ್ಪಮಂಜರಿಯೂ ಚಿಗುರುತ್ತದೆ.  ಹೂಗಳಿಗೆ ತೊಟ್ಟು ಇಲ್ಲ. ಹೂಗಳಲ್ಲಿ ಕೆಲವು ದ್ವಿಲಿಂಗಿಗಳು ಮತ್ತು ಕೆಲವು ಗಂಡು ಹೆಣ್ಣು ಹೂಗಳು.ಹೂವಿನ ಪುಷ್ಪಪಾತ್ರೆ ಬಟ್ಟಲಿನಂತೆ ಇದೆ.ಹೂವಿನಲ್ಲಿ ದಳಗಳಿಲ್ಲ.ಕೇಸರಗಳ ಸಂಖ್ಯೆ 10, ಪ್ರತಿ ಸುತ್ತಿನಲ್ಲಿ 5 ರಂತೆ ಎರಡು ಸುತ್ತಿನಲ್ಲೂ ಜೋಡಣೆಯಾಗಿವೆ. ಅಂಡಾಶಯ ಹೂವಿನ ಇತರ ಭಾಗಗಳಿಗಿಂತ ಕೆಳ ಸ್ಥಾನದಲ್ಲಿದೆ. ಅಂಡಾಶಯದಲ್ಲಿ ಒಂದು ಕೋಣೆ ಯಿದೆ. ಕಾಯಿ ಗೋಳಾಕಾರವಾಗಿದೆ.ಕಾಯಿಯ ಮೇಲೆ ರೇಷ್ಮೆಯಂತೆ ನುಣುಪಾದ ಸೂಕ್ಷ್ಮ ರೋಮಗಳಿವೆ.

 ಹೂ ಮತ್ತು ಕಾಯಿಗಳ ಕಾಲ : ಮಾರ್ಚು- ಜುಲೈ.

     ಬೃಹದ್ದಾಕಾರವಾಗಿ ಬೆಳೆಯುವ ಮರವಾದುದರಿಂದ, ಎಲೆಗಳು ಕಾಂಡದ ತುದಿಯಲ್ಲಿ ಗುಂಪಾಗಿರುವುದರಿಂದ, ಸೂಕ್ಷ್ಮ ರೂಪದ ದ್ವಿಲಿಂಗ,  ಗಂಡು ಮತ್ತು ಹೆಣ್ಣು ಹೂಗಳು ಸ್ಟ್ರೈಕ್ ಮಾದರಿಯ ಪುಷ್ಪಮಂಜರಿಯಲ್ಲಿ ರುವುದರಿಂದ, ಗೋಲಾಕಾರದ ಕಾಯಿಯ ಮೇಲೆ ರೇಷ್ಮೆಂತೆ ಹೊಳ ಪಾದ ಸೂಕ್ಷ್ಮ ರೋಮಗಳಿರುವುದರಿಂದ ಮತ್ತು ವಿಶೇಷವಾಗಿ ಶನೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬೆಳೆಸುವುದರಿಂದ ಸುಲಭವಾಗಿ ಗುರುತಿಸಬಹುದು.

     ತಾರೆಕಾಯಿ ಮರದ ವಿವಿಧ ಭಾಗಗಳಿಂದ ಬೇರ್ಪಡಿಸಿ ಗುರೂಜಿ ಸಾಲದ ಕೆಲವು ರಾಸಾಯನಿಕ ಘಟಕಗಳ ಹೆಸರು ಈ ಕೆಳಗಿನಂತೆ ಇವೆ.

1. ಕಾಂಡದ ತೊಗಟೆ — ಅರ್ಜುನ್ ಚೆನಿನ್ ಬಿಲ್ಲರಿಕ್, ಆಮ್ಲ, ಬಿಲ್ಲಿರಿಕೊಸೈಡ್,   ಟ್ಯಾನಿನ್ಸ್, ಗ್ಯಾಲಿಕ್ ಆಮ್ಲ ಎಲ್ಲಾಜೀಕ್ ಆಮ್ಲ ಮುಂತಾದವುಗಳು

2. ಎಲೆ— ಟ್ಯಾನೀಸ್, ಗ್ಯಾಲಿಕ್ ಆಮ್ಲ ಎಲ್ಲಾಜಿಕ್ ಆಮ್ಲ, ಮಿಥೈಲ್ ಗ್ಯಾಲೇಟ್,ಲುಟಿಯೊಲಿನ್, ಎಗ್ಲೈ ಕೋನ್ಸ್,ಸ್ಯಾಪೊನಿನ್ಸ್, ಅಮೈನೊ ಆಮ್ಲ ಪ್ರೋಟೀನ್, ಶರ್ಕರ  ಪಿಷ್ಠ ಮುಂತಾದವುಗಳು.

3. ಕಾಯಿ — ಫ್ಲೆವೊನಾಯ್ಡ್ಸ, ಸ್ಟೀರಾಲ್ಸ್, ಗ್ಯಾಲಿಕ್ ಆಮ್ಲ,ಎಲ್ಲಾಜಿಕ್ ಆಮ್ಲ, ಫೀನಾಲ್,ಟ್ಯಾನಿನ್ಸ್, ಚೆಬುಲಾಜಿಕ್ ಆಮ್ಲ, ಮುಂತಾದವುಗಳು.

 ಔಷಧೀಯ ಗುಣಗಳನ್ನು ಕೆಲವು ರಾಸಾಯನಿಕ ಘಟಕಗಳ ಪಟ್ಟಿ

1. ಗಲ್ಲಿಕ್ ಆಸಿಡ್-  ಪಿತ್ತ ಜನಾಂಗದ ಮತ್ತು ಮೂತ್ರಪಿಂಡವನ್ನು ಕಾಪಾಡುವ ಗುಣ.

 ಬೊಜ್ಜನ್ನು ಕಡಿಮೆ ಮಾಡುವ ಗುಣ.

 ಸ್ಥಾನದ ಕ್ಯಾನ್ಸರ್ ವಾಸಿ ಮಾಡುವ ಗುಣ

 ಉರಿಯೂತವನ್ನು ಕಡಿಮೆ ಮಾಡುವ ಗುಣ.

2. ಎಲ್ಲಜಿಕ್ ಆಸಿಡ್ — ಆೄಂಟಿ ಆಕ್ಸಿಡೆಂಟ್,ಉರಿಯೂತ ಕಡಿಮೆ ಮಾಡುವ ಮತ್ತು ಪಿತ್ತ  ಜನಾಂಗವನ್ನು ಕಾಪಾಡುವ ಗುಣ.

3. ಅತ್ಲೆ ಗಳ್ಳತೆ — ಸ್ಥಾನದ ಕ್ಯಾನ್ಸರ್ ವಾಸಿ ಮಾಡುವ ಗುಣ.

 ತಾರೆಕಾಯಿ ಬೀಜದಿಂದ ತಯಾರಿಸಿದ ಎಣ್ಣೆಯಿಂದ ಜೈವಿಕ ಇಂಧನ ತಯಾರಿಸುವ ದಿಕ್ಕಿನಲ್ಲಿ ಸಂಶೋಧನೆ ನಡೆಯುತ್ತಿದೆ.