ಮನೆ ಉದ್ಯೋಗ ಡಿಸಿಸಿ ಬ್ಯಾಂಕ್‌ ನಲ್ಲಿ 85 ಹುದ್ದೆಗಳು ಖಾಲಿ: ಅರ್ಜಿ ಆಹ್ವಾನ

ಡಿಸಿಸಿ ಬ್ಯಾಂಕ್‌ ನಲ್ಲಿ 85 ಹುದ್ದೆಗಳು ಖಾಲಿ: ಅರ್ಜಿ ಆಹ್ವಾನ

0

ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​ ನಿಯಮಿತ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ.

Join Our Whatsapp Group

ಈ ಬ್ಯಾಂಕ್ 85 ಹುದ್ದೆಗಳ ನೇಮಕಾತಿಗಾಗಿ ಈಗಾಗಲೇ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು chikkamagalurudccbank.com ಈ ಅಧಿಕೃತ ವೆಬ್‌ ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಹುದ್ದೆಗಳ ವಿವರ

* ಇಲಾಖೆ ಹೆಸರು : ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್

* ಹುದ್ದೆಗಳ ಸಂಖ್ಯೆ : 85

* ಹುದ್ದೆಗಳ ಹೆಸರು : ಸಹಾಯಕ ವ್ಯವಸ್ಥಾಪಕ : 4, ಮೊದಲ ವಿಭಾಗದ ಸಹಾಯಕ/ಮೇಲ್ವಿಚಾರಕರು : 18, ಕಿರಿಯ ಸಹಾಯಕ : 53 ಹಾಗೂ ಅಟೆಂಡರ್ : 10.

* ಉದ್ಯೋಗ ಸ್ಥಳ : ಚಿಕ್ಕಮಗಳೂರು

ಹುದ್ದೆವಾರು ವೇತನ ಶ್ರೇಣಿ :

* ಸಹಾಯಕ ವ್ಯವಸ್ಥಾಪಕರು : ರೂ. 36000-67550

* ಪ್ರಥಮ ದರ್ಜೆ ಸಹಾಯಕರು /ಮೇಲ್ವಿಚಾರಕರು : ರೂ. 27650-52650

* ಕಿರಿಯ ಸಹಾಯಕರು : ರೂ. 21400-42000

* ಸಹಾಯಕರು/ಅಟೆಂಡರ್ : ರೂ. 18600-32600

ಶೈಕ್ಷಣಿಕ ಅರ್ಹತೆ ಹಾಗೂ ವಯೋಮಿತಿ

* ಸಹಾಯಕ ವ್ಯವಸ್ಥಾಪಕ, ಮೊದಲ ವಿಭಾಗದ ಸಹಾಯಕ/ಮೇಲ್ವಿಚಾರಕರು, ಕಿರಿಯ ಸಹಾಯಕ ಹಾಗೂ ಅಟೆಂಡರ್ ಈ ಹುದ್ದೆಗಳ ಅನುಸಾರವಾಗಿ ಅಭ್ಯರ್ಥಿಯೂ ಸ್ನಾತಕೋತ್ತರ, ಪದವಿ, ಎಸ್​ಎಸ್​​ಎಲ್​ಸಿ ವಿದ್ಯಾಭ್ಯಾಸವನ್ನು ಹೊಂದಿರಬೇಕು.

* ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಪೂರೈಸಿರಬೇಕು.

* ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ವಿಕಲಚೇತನ ಮತ್ತು ವಿಧವಾ ಮಹಿಳಾ ಅಭ್ಯರ್ಥಿಗಳಿಗೆ 10 ವರ್ಷ ವಯಸ್ಸಿನ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ

* ಸಾಮಾನ್ಯ ಅರ್ಹತೆ, ಒಬಿಸಿ- 1,500 ರೂಪಾಯಿ

* ಎಸ್​​ಸಿ, ಎಸ್​ಟಿ, ವಿಶೇಷ ಚೇತನರು- 750 ರೂ.

ಆಯ್ಕೆ ಪ್ರಕ್ರಿಯೆ

* ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಸಂದರ್ಶನದ ಆಧಾರದಲ್ಲಿ ನೇಮಕಾತಿ ಮಾಡಲಾಗುವುದು.

ಆನ್‌ ಲೈನ್ ಅರ್ಜಿ ಸಲ್ಲಿಸುವುದು ಹೇಗೆ?

* chikkamagalurudccbank.com ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್‌ಲೋಡ್ ಮಾಡಿ.

* ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ ಅರ್ಹ ಅಭ್ಯರ್ಥಿಗಳಾಗಿದ್ದರೆ ಆನ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.

* ಕೊಟ್ಟಿರುವ ಫಾರ್ಮನ್ನು ಸರಿಯಾಗಿ ಭರ್ತಿ ಮಾಡಿ, ಅರ್ಜಿ ಶುಲ್ಕದ ಪಾವತಿಯಿದ್ದರೆ (ವಿನಂತಿಸಿದ್ದರೆ ಮಾತ್ರ) ಆನ್ಲೈನ್ ನಲ್ಲಿ ಪಾವತಿಸಿ.

* ಈ ಅರ್ಜಿಯೊಂದಿಗೆ ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ. ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.

* ಅಂತಿಮವಾಗಿ, ಈ ಅರ್ಜಿಯನ್ನು ಮುದ್ರಿಸಲು ಮರೆಯಬೇಡಿ.

ಪ್ರಮುಖ ದಿನಾಂಕಗಳು

* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 29-10-2024.

* ಅರ್ಜಿ ಸಲ್ಲಿಸಲು ಹಾಗೂ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 27-11-2024.