ಎತ್ತರದ ಪ್ರದೇಶಕ್ಕೆ ಹೋದರೆ :
ನಾವು ಎತ್ತರ ಪ್ರದೇಶಕ್ಕೆ ಹೋದಷ್ಟು ಅಲ್ಲಿಯ ವಾತಾವರಣದ ಹವಾಮಾನದಿಂದ ಬದಲಾವಣೆಯಾಗುತ್ತದೆ. ಮೊದಲು ಪ್ರತಿಸಾವಿರ ಅಡಿಗಳು ಮೇಲೆ ಹೋದಂತೆ ಒಂದು ಡಿಗ್ರಿ ಉಷ್ಣಾಂಶ ಕಡಿಮೆಯಾಗುತ್ತಾ ಹೋಗುತ್ತದೆ. ಎರಡನೇಯದಾಗಿ ಪ್ರತಿ ಸಾವಿರ ಅಡಿಗಳಿಗೆ ಒಂದು ಡಿಗ್ರಿಯಷ್ಟು ಗಾಳಿಯ ಒತ್ತಡ ಕಡಿಮೆಯಾಗುತ್ತದೆ.ಮೇಲೆ ಹೋದಂತೆ ಗಾಳಿಯ ಒತ್ತಡದಿಂದ ಆಮ್ಲಜನಕದ ಅಂಶವು ಸಹ ವಾತಾವರಣದಲ್ಲಿ ಕಡಿಮೆಯಾಗಿ ನಮಗೆ ಬೇಕಾದ ಆಮ್ಲಜನಕದ ಕೊರತೆಯಿಂದ ನಾವು ಉಸಿರಾಟವನ್ನು ವೇಗವಾಗಿ ಮಾಡುತ್ತಾ ಆಮ್ಲಜನಕವನ್ನು ಹೇಗೋ ಪಡೆಯಲು ಪ್ರಯತ್ನಿಸುತ್ತೇವೆ.ಆದರೆ ಈ ವೇಗದ ಉಸಿರಾಟವೇ ನಮಗೆ ಕೆಲಕಾಲದಲ್ಲಿ ಅಸ್ತಮವಾಗಿ ಪರಿವರ್ತನೆ ಕೊಳ್ಳುತ್ತದೆ.
ಆಹಾರ ಮತ್ತು ಜೀವನ ವಿಧಾನ :
ನಾವು ತೆಗೆದುಕೊಳ್ಳುವ ಆಹಾರದಲ್ಲಿ ಅಲರ್ಜಿಯುತವಾಗಿದ್ದರೆ, ಕೊಳೆತ,ಬೂಸ್ಟ್ ಬಂದ ಆಹಾರ ಸೇವನೆಯು ಆರೋಗ್ಯಕ್ಕೆ ಅಪಾಯಕಾರಿ.ಅದು ನಮ್ಮ ಅಂಗಗಳಲ್ಲಿ ಸೂಕ್ಷ್ಮವಾದ ಅಂಗ ಮತ್ತು ಚರ್ಮದ ಮೇಲೆ ಸುಲಭವಾಗಿ ಮತ್ತು ಶೀಘ್ರವಾಗಿ ಅಲರ್ಜಿಗಳು ಕಾಣಿಸಿಕೊಳ್ಳುತ್ತದೆ.ಅದು ನಮ್ಮ ಮೂಗು ಗಂಟಲು, ಶ್ವಾಸನಾಳಗಳ ಮೇಲೆ ಪ್ರಾಭಾವ, ಬೀರಿ, ನಮ್ಮ ಸ್ವರದಲ್ಲಿ ವ್ಯತ್ಯಾಸವಾಗುವುದನ್ನು ನೋಡುತ್ತೇವೆ. ಇದರಿಂದ ಕಾಲಕ್ರಮೇಣ ಅಮಸ್ತ ವ್ಯಾಧಿ ಬರುವ ಸಾಧ್ಯತೆ ಇರುತ್ತದೆ. ಅದೇ ರೀತಿ ಹೆಚ್ಚು ಹಾಲಿನ ತಿನಿಸು, ಬ್ರೆಡ್, ಕೇಕ್, ಸಕ್ಕರೆ, ಹಾಲು, ಹಾಲಿನಕೆನೆ ಪದಾರ್ಥಗಳಿಂದ ಅಸ್ತಮ ಬರುವ ಸಾಧ್ಯತೆ ಇದೆ.
ನಾವು ನಮ್ಮ ಜೀವನವನ್ನು ಯಾವ ರೀತಿ ಅನುಸರಿಸಿತ್ತೇವೋ ಅದರಂತೆ ನಮ್ಮ ಆರೋಗ್ಯ ಇರುತ್ತದೆ.ನಾವು ಉತ್ತಮ ಆಹಾರ ತೆಗೆದುಕೊಳ್ಳುವಂತೆ, ಉತ್ತಮ ಸ್ಥಳದಲ್ಲಿ ವೃತ್ತಿ, ನಿದ್ರೆ, ವಿಶ್ರಾಂತಿ, ಕ್ರೀಡೆ, ಆಹಾರ ಪಾನೀಯ ತೆಗೆದುಕೊಳ್ಳುವುದರಿಂದ ಆರೋಗ್ಯ ಉತ್ತಮವಾಗುತ್ತದೆ. ಒಂದು ವೇಳೆ ನಾವು ಕೊಳಕು, ಧೂಳು ತುಂಬಿದ ಸ್ಥಳದಲ್ಲಿ ವಾಸ, ವೃತ್ತಿ, ವ್ಯವಹಾರದಿಂದ ನಮ್ಮ ಆರೋಗ್ಯ ಉಸಿರಾಟದಿಂದ ನರಳುತ್ತದೆ.
ಆರಂಭದ ಅಸ್ತಮ ವ್ಯಾದಿ :
ಅನಿಕ ಅಸ್ತಮಾ ವ್ಯಾಧಿಗ್ರಸರಿಗೆ ಆಕಸ್ಮಿಕವಾಗಿ ಶೀತ ಆರಂಭವಾಗಿ, ಮೂಗಿನಲ್ಲಿ ಊರಿ, ಅಲರ್ಜಿ ಆಗಿ,ಸೀನು ಆರಂಭವಾಗಿ ಮೂಗಿನಲ್ಲಿ ಸಿಂಬಳವು ಆರಂಭವಾಗಿ ಮೂಗಿನ ಮೃದುವಾದ ಚರ್ಮದ ಪೊರೆಯು ಸ್ವಲ್ಪ ಉತವಾಗಿ ಮೂಗಿನ ಸಿಂಬಳವು ಗಟ್ಟಿಯಾಗಿ ಅದು ಮೂಗಿನ ಪೊರೆಯಲ್ಲಿ ಅಂಟಿಕೊಂಡು ಕಫ ಆರಂಭವಾಗಿ ಕೆಮ್ಮು ಉತ್ಪತ್ತಿಯಾಗುತ್ತದೆ.ಈ ಕೆಮ್ಮಿನ ತೀವ್ರತೆಯಿಂದ ನಮ್ಮ ಎದೆಯು ಅಗಲವಾಗಿ,ನಮ್ಮ ಶ್ವಾಸಕೋಶದಲ್ಲಿ ಗಾಳಿಯಿಂದ ಉಬ್ಬಿಕೊಳ್ಳುತ್ತದೆ. ಅಲ್ಲದೆ ಶ್ವಾಸನಾಳಗಳೂ ಸಹ ಅಧಿಕ ಕಫದಿಂದ ಶೀಘ್ರದಲ್ಲಿ ಸೋಂಕು ತಗುಲಿ ತೀವ್ರವಾಗಿ ಉಸಿರಾಟಕ್ಕೆ ಅಡ್ಡಿ ಉಂಟು ಮಾಡುತ್ತದೆ. ಇದರ ತೀವ್ರತೆಯು ಶ್ವಾಸನಾಳ ಅಥವಾ ಶ್ವಾಸಕೋಶ ನಿಸ್ಕ್ರೀಯತೆ ಉಂಟಾಗಿ ಕೆಲವೇ ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ಮರಣ ಸಾಧ್ಯತೆ ಇರುತ್ತದೆ.
ಅಸ್ತಮಾ ವ್ಯಾದಿಗ್ರಸ್ತರಿಗೆ ಶೀಘ್ರ ಉಪಚಾರಗಳು :
ಮನೆಯಲ್ಲಿ ಉಪಚಾರ :
1. ನೀರಿನ ಅವಿಯನ್ನು ಮೂಗಿಗೆ ತೆಗೆದುಕೊಳ್ಳುವುದು. ಇದರಿಂದ ಮೂಗಿನಲ್ಲಿ ಮತ್ತು ಶ್ವಾಸನಾಳಗಳಲ್ಲಿ ಕಟ್ಟಿರುವ ಕಫ ಸಡಿಲವಾಗಿ ಕರಗುತ್ತಾ ಉಸಿರಾಟ ಸುಲಭವಾಗುತ್ತದೆ. ಮೂಗಿನ ಸಿಂಬಳವು ಸಹ ಹೊರಗೆ ಬರುತ್ತದೆ.
2. ಬಿಸಿಯಾದ ನೀರು ಅಥವಾ ಬಿಸಿಯಾದ ದ್ರವ್ಯ ಆಹಾರಗಳಾದ ಸೂಪ್, ನಿಂಬೆರಸ ತೆಗೆದುಕೊಳ್ಳುವುದು.
3. ಬಿಸಿಯಾದ ನೀರಿನ ಚೀಲವನ್ನು ಎದೆ ಹೊಟ್ಟೆಯ ಮೇಲೆ ಇಟ್ಟುಕೊಳ್ಳಿ.
4. ಎದೆ,ಬೆನ್ನು ಮೇಲೆ ಬಲವಾಗಿ ಉಜ್ಜುವುದು.
5. ನೀವು ಸ್ವಲ್ಪ ಎತ್ತರವಾದ ಕಟ್ಟೆಯ ಮೇಲೆ ಬೋರಲಾಗಿ ಮಲಗಿ ನಿಮ್ಮ ತಲೆಯು ಕಟ್ಟೆಯಿಂದ ಹೊರಗೆ ಬಂದು,ನೀವು ನಿಮ್ಮ ಎರಡೂ ಕೈಗಳ ಮೊಳ ಕೈಗಳನ್ನು ನೆಲದಲ್ಲಿ ಉರಿಕೊಳ್ಳಿ.ಆನಂತರ ನಿಧಾನವಾಗಿ ಉಸಿರಾಟ ಆರಂಭಿಸಿದರೆ ನಿಮ್ಮ ಮೂಗಿನಲ್ಲಿರುವ ಕಫ ಕರಗಿ ಸಿಂಬಳವು ಕೆಳಮುಖವಾಗಿ ಹೊರಗೆ ಬರುತ್ತದೆ.ನಿಮಗೆ ಎಷ್ಟು ಸಾಧ್ಯವೋ ಅಷ್ಟು ಹೊರಹಾಕಲು ಪ್ರಯತ್ನಿಸಿ.ನಿಧಾನವಾಗಿ ನಿಮ್ಮ ಉಸಿರಾಟ ಸಾಮಾನ್ಯ ಸ್ಥಿತಿಗೆ ಬರುತ್ತದೆ.
6. ಕುರ್ಚಿ ಮೇಲೆ ಕುಳಿತು ಮೇಜಿನ ಮೇಲೆ ತಲೆದಿಂಬು ಅದರ ಮೇಲೆ ನಿಮ್ಮ ತಲೆಯಿಟ್ಟು ಪಕ್ಕಕ್ಕೆ ತಿರುಗಿ ಒಂದು ಮೂಗು ಮುಚ್ಚಿ ಮತ್ತೊಂದು ಮೂಗಿನ ಹೊಳ್ಳೆಯಿಂದ ಬಲವಾಗಿ ಉಸಿರು ತೆಗೆದುಕೊಳ್ಳಿ. ಸ್ವಲ್ಪ ಕಾಲದ ನಂತರ ನಿಧಾನವಾಗಿ ಬಾಯಿಯಿಂದ ಆ ಉಸಿರಾಟ ಬಿಡಿ, ಇದರಿಂದ ನಿಮ್ಮ ಉಸಿರಾಟ ನಿಧನವಾಗಿ ಸರಿ ಹೋಗುತ್ತದೆ.