ಇಂದು ಸೊಸೆಯಾಗಿ ಬಂದವರು ನಾಳೆ ಅತ್ತೆ ಆಗುತ್ತಾರೆ. ಹಾಗೆಂದು ಈಗ ಇರುವ ಅತ್ತೆಯನ್ನು ಅಗೌರವದಿಂದ ಕಾಣುವುದು ಸರಿಯಲ್ಲ. ಅಂದರೆ ಸೊಸೆಯಾಗಿ ಬಂದವರು ಕೆಟ್ಟವರು ಎಂದರ್ಥವಲ್ಲ. ಅವರವರ ಆಲೋಚನೆಗಳ ಮೂಲಕ ನೋಡಿದರೆ ಎಲ್ಲರೂ ಒಳ್ಳೆಯವರಾಗಿಯೇ ಕಾಣುತ್ತಾರೆ.
ಆದರೆ ಆಲೋಚನೆ ಮಾಡುವ ಮಾರ್ಗ ಮಾತ್ರ ಬೇರೆ ಬೇರೆ ಆಗಿರುತ್ತದೆ ಅಷ್ಟೇ! ಮಾತಿನ ಈಟಿಯಲ್ಲಿ ತಿವಿಯುವ ಅತ್ತೆಯನ್ನು ಸೌಜನ್ಯದ ಮಾತಿ ನಿಂದಲೇ ಕಟ್ಟಿ ಹಾಕಿ ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನವನ್ನು ಸೊಸೆ ಮಾಡಬೇಕು. ಈ ಲೇಖನದಲ್ಲಿ ಅಂತಹ ಟೆಕ್ನಿಕ್ ಗಳನ್ನು ತಿಳಿಸಿ ಕೊಡಲಾಗಿದೆ.
ವಾದ ಮಾಡಬೇಡಿ
• ಯಾವುದೋ ಒಂದು ಸಣ್ಣ ವಿಷಯಕ್ಕೆ ಅತ್ತೆ ನಿಮ್ಮ ಜೊತೆ ಜಗಳ ಮಾಡುತ್ತಿದ್ದಾರೆ ಎಂದರೆ ನೀವು ಅದನ್ನು ಮುಂದುವ ರೆಸದೇ ಇರುವುದು ಒಳ್ಳೆಯದು. ಏಕೆಂದರೆ ನೀವು ವಾದ ಮಾಡಲು ಹೋದರೆ ಜಗಳ ಮತ್ತಷ್ಟು ದೊಡ್ಡದಾಗುತ್ತದೆ.
• ಒಂದು ವೇಳೆ ನಿಮ್ಮ ಆಲೋಚನೆ ಸರಿ ಇದ್ದರೆ ಅದನ್ನು ನಿಧಾನ ವಾಗಿ ತಾಳ್ಮೆಯಿಂದ ತಿಳಿಸಿ ಹೇಳಿ ಅವರಿಗೆ ಅರ್ಥ ಮಾಡಿಸಿ. ಅವರು ನಿಮಗಿಂತ ವಯಸ್ಸಿನಲ್ಲಿ ದೊಡ್ಡವರು ಎಂಬ ಗೌರವ ನಿಮ್ಮ ಮನಸ್ಸಿನಲ್ಲಿ ಇರಲಿ.
• ನೀವು ಎಷ್ಟೇ ಹೇಳಿದರೂ ಅವರು ಕೇಳುತ್ತಿಲ್ಲ ಎಂದಾದರೆ ನೀವೇ ಸೈಲೆಂಟ್ ಆಗಿ ಅಲ್ಲಿಂದ ಹೊರಟು ಬಿಡಿ. ಏಕೆಂ ದರೆ ಸಾಕಷ್ಟು ಸಮಸ್ಯೆಗಳಿಗೆ ಸೈಲೆನ್ಸ್ ಕೆಲವೊಮ್ಮೆ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಆಕೆಯನ್ನು ಅರ್ಥ ಮಾಡಿಕೊಳ್ಳಿ
• ಅತ್ತೆ ಸೊಸೆ ಮೇಲೆ ಕೋಪ ಮಾಡಿಕೊಳ್ಳಲು ಪ್ರಮುಖ ಕಾರಣ ಏನು ಗೊತ್ತಾ? ಸೂಕ್ಷ್ಮ ಮನಸ್ಸಿನ ಕೆಲವು ಮಹಿಳೆ ಯರು ತಮ್ಮ ಮಗನನ್ನು ಎಲ್ಲೋ ಒಂದು ಕಡೆ ಕಳೆದು ಕೊಳ್ಳುತ್ತಿದ್ದೇನೆ ಎಂದುಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅದನ್ನು ಸೊಸೆಯ ಮೇಲೆ ಕೋಪದ ರೀತಿ ತೀರಿಸಿ ಕೊಳ್ಳುತ್ತಾರೆ.
• ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನಿಮಗೂ ಮನಸ್ಸಿ ನಲ್ಲಿ ನಿಮ್ಮ ಗಂಡ ನಿಮಗೆ ಮೊದಲ ಪ್ರಾಶಸ್ತ್ಯ ಕೊಡ ಬೇಕು ಎಂಬ ಆಲೋಚನೆ ಇರುತ್ತದೆ ನಿಜ. ಹಾಗೆಂದು ಸಂಪೂರ್ಣ ವಾಗಿ ನಿಮ್ಮ ಗಂಡ ಅವರ ತಾಯಿ ಯನ್ನು ನಿರ್ಲಕ್ಷ್ಯ ಮಾಡ ಬೇಕು ಎನ್ನುವ ಮಟ್ಟಿಗೆ ಅದು ಹೋಗಬಾರದು.
• ಹಾಗಾಗಿ ಇಂತಹ ಸಂದರ್ಭವನ್ನು ಬುದ್ಧಿವಂತಿಕೆಯಿಂದ ಬ್ಯಾಲೆನ್ಸ್ ಮಾಡುವುದನ್ನು ಕಲಿಯಿರಿ. ನಿಮ್ಮಿಂದ ಇನ್ನೊಬ್ಬರ ಮನಸ್ಸಿಗೆ ನೋವಾಗುವುದು ಬೇಡ.
ನಿಮ್ಮ ಅತ್ತೆ ಬದಲಾಗುವುದಿಲ್ಲ
• ನೀವು ಮಾಡಿದ ಯಾವುದೇ ಒಳ್ಳೆಯ ಕೆಲಸ ನಿಮ್ಮ ಅತ್ತೆಗೆ ಇಷ್ಟವಾಗುತ್ತಿಲ್ಲ, ಅವರು ನಿಮ್ಮ ಬೆನ್ನ ಹಿಂದೆ ನಿಮ್ಮ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ, ನೀವು ಏನೇ ಪ್ರಯತ್ನ ಪಟ್ಟರೂ ಅವರ ಮನಸ್ಸನ್ನು ಗೆಲ್ಲಲು ಸಾಧ್ಯವಾಗುತ್ತಿಲ್ಲ ಎನ್ನುವುದಾದರೆ ಸಾಧ್ಯವಾದಷ್ಟು ಭಾವನಾತ್ಮಕವಾಗಿ ಆಕೆಯಿಂದ ದೂರ ಇರಲು ನೀವೇ ಟ್ರೈ ಮಾಡಿ.
• ಹಾಗೆಂದು ಆಕೆಗೆ ಮನಸ್ಸಿಗೆ ನೋವುಂಟು ಮಾಡುವ ಕೆಲಸ ಮಾಡಬೇಡಿ. ಕೊಡುವ ಗೌರವವನ್ನು ಸಂಪೂರ್ಣ ವಾಗಿ ಕೊಡಿ. ಈ ವಿಚಾರದಲ್ಲಿ ನೀವು ತುಂಬಾ ಎಮೋಷ ನಲ್ ಆಗದೇ ಇರು ವುದು ಒಳ್ಳೆಯದು. ಆಗ ಅವರಿಗೆ ನಿಮ್ಮ ಬಗ್ಗೆ ಅರ್ಥ ಆಗುತ್ತದೆ.
ಜಗಳ ಶುರುವಾಗುವ ಪಾಯಿಂಟ್
• ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ಕಾರಣಕ್ಕೆ ಅತ್ತೆ ಸೊಸೆ ನಡುವೆ ಜಗಳ ನಡೆಯುತ್ತಿರುತ್ತದೆ. ನಿಮ್ಮ ಮನೆ ಯಲ್ಲಿ ಯಾವ ಕಾರಣಕ್ಕೆ ನಿರಂತರವಾಗಿ ಜಗಳ ಆಗುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ.
• ಅದನ್ನು ಅರ್ಥ ಮಾಡಿಕೊಂಡು ಸರಿಪಡಿಸಲು ಟ್ರೈ ಮಾಡಿ. ಸಮಸ್ಯೆಯನ್ನು ಮತ್ತಷ್ಟು ಜಟಿಲ ಮಾಡುವುದು ಬೇಡ. ಮನೆಯ ವಿಚಾರ ನಿಮ್ಮ ಜವಾಬ್ದಾರಿ ಕೂಡ ಆಗಿರುವುದರಿಂದ ಮನೆಯ ಮರ್ಯಾದೆಯನ್ನು ಕಾಪಾ ಡಲು ಸಂಪೂರ್ಣವಾಗಿ ಪ್ರಯತ್ನಿಸಿ.
ಅತ್ತೆಯ ಬಗ್ಗೆ ಕಂಪ್ಲೇಂಟ್ ಮಾಡಬೇಡಿ
• ಇದು ಇರುವ ಸಮಸ್ಯೆಯನ್ನು ಮತ್ತಷ್ಟು ದೊಡ್ಡದಾಗಿ ಸುತ್ತದೆ. ಹಾಗಾಗಿ ನೀವಾಗಿಯೇ ಸಮಸ್ಯೆಗಳನ್ನು ಹೆಚ್ಚು ಮಾಡಿಕೊಳ್ಳಲು ಹೋಗಬೇಡಿ. ನಿಮ್ಮ ಅತ್ತೆಯ ಬಗ್ಗೆ ನಿಮ್ಮ ಗಂಡನ ಬಳಿ ಅಥವಾ ನಿಮ್ಮ ತವರು ಮನೆಯವರ ಹತ್ತಿರ ದೂರು ಹೇಳುವುದು ಬೇಡ.
• ಏಕೆಂದರೆ ನಿಮ್ಮ ಗಂಡ ನಿಮ್ಮನ್ನು ಇಷ್ಟಪಡುವ ಹಾಗೆ ಅವರ ತಾಯಿಯನ್ನು ಕೂಡ ಇಷ್ಟಪಡುತ್ತಾರೆ. ಹಾಗಾಗಿ ನೀವು ಸದಾ ದೂರು ಹೇಳುತ್ತಾ ಹೋದರೆ, ಅದು ಮುಂದೊಂದು ದಿನ ನಿಮಗೆ ತಿರುಗುಬಾಣವಾಗಬಹುದು.
ಅತ್ತೆಯ ಬುದ್ಧಿವಾದ ಮಾತುಗಳು
• ಸಾಕಷ್ಟು ಮನೆಗಳಲ್ಲಿ ಹೀಗೂ ಕೂಡ ಆಗುತ್ತದೆ. ಅತ್ತೆ ಸೊಸೆಗೆ ಬುದ್ಧಿ ಹೇಳಿ ಎಲ್ಲಿಯೂ ತಪ್ಪಾಗದಂತೆ ಬೇರೆ ಯವರು ನಮ್ಮ ಕಡೆ ಬೆರಳು ಮಾಡಿ ತೋರಿಸದಂತೆ ನಮ್ಮ ಮನೆ ಇರಬೇಕು ಎಂದುಕೊಳ್ಳುತ್ತಾರೆ.
• ಆದರೆ ಇದನ್ನು ಸೊಸೆಯಾಗಿ ಬಂದವರು ತಪ್ಪಾಗಿ ಅರ್ಥ ಮಾಡಿ ಕೊಂಡು ಅತ್ತೆಯ ಮೇಲೆ ಜಗಳಕ್ಕೆ ಹೋಗುವುದು ಉಂಟು.
• ಹಾಗಾಗಿ ಅವರ ಅನುಭವದ ಆಲೋಚನೆಗಳನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಒಳ್ಳೆ ಯದು. ಸಾಧ್ಯವಾದಷ್ಟು ಅವರ ಮಾತಿಗೆ ಮನ್ನಣೆ ನೀಡುವುದನ್ನು ಕಲಿತು ಕೊಂಡು ನಿಮ್ಮ ಕುಟುಂಬ ಸುಖಮಯವಾಗಿರುವ ಹಾಗೆ ನೋಡಿಕೊಳ್ಳಿ.