‘ತಾಮರ ಹೆಲ್ತ್ ಕೇರ್ ಸೆಂಟರ್’ನಲ್ಲಿ ಯುವತಿ ಸಾವು: ಕೊಲೆ ಶಂಕೆ

ಮೈಸೂರು: ತಾಮರ್ ಹೆಲ್ತ್ ಕೇರ್’ನಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ  ಮಮತಾ (25) ಬಾತ್ ರೂಂ’ನಲ್ಲಿ ಬಿದ್ದು ಮೃತಪಟ್ಟಿರುವುದಾಗಿ ಸಂಸ್ಥೆಯವರು ಹೇಳಿದ್ದು, ಆಕೆಯ ದೇಹದ ಮೇಲಾಗಿದ್ದ ಗಾಯಗಳಿಂದಾಗಿ ಇದೊಂದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಮೃತರ ಪೋಷಕರು ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆಕೆಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಕೊಳ್ಳೇಗಾಲ ಸಹಾಯಕ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್  ಅವರ ನೇತೃತ್ವದಲ್ಲಿ ದೇಹವನ್ನು ಸಮಾಧಿಯಿಂದ ಹೊರ ತೆಗೆಯಲಾಗುತ್ತಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ … Continue reading ‘ತಾಮರ ಹೆಲ್ತ್ ಕೇರ್ ಸೆಂಟರ್’ನಲ್ಲಿ ಯುವತಿ ಸಾವು: ಕೊಲೆ ಶಂಕೆ