ಮನೆ ಸುದ್ದಿ ಜಾಲ ರಾಣಿ 2ನೇ ಎಲಿಜಬೆತ್ ನಿಧನ: ಹಳೆಯ ವಿಡಿಯೋ ಹಂಚಿಕೊಂಡು ಸಂತಾಪ ಸೂಚಿಸಿದ ಯದುವೀರ್ ಒಡೆಯರ್

ರಾಣಿ 2ನೇ ಎಲಿಜಬೆತ್ ನಿಧನ: ಹಳೆಯ ವಿಡಿಯೋ ಹಂಚಿಕೊಂಡು ಸಂತಾಪ ಸೂಚಿಸಿದ ಯದುವೀರ್ ಒಡೆಯರ್

0

ಮೈಸೂರು(Mysuru): ಬ್ರಿಟನ್ ರಾಣಿ 2ನೇ ಎಲಿಜಬೆತ್​ ನಿಧನಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಳೆಯ ವಿಡಿಯೋವನ್ನು ಹಂಚಿ ಸಂತಾಪ ಸೂಚಿಸಿದ್ದಾರೆ.

1950 ದಶಕದ ಉತ್ತರಾರ್ಧದಲ್ಲಿ ರಾಣಿ ಎರಡನೇ ಎಲಿಜಬೆತ್ ಬೆಂಗಳೂರಿಗೆ ಬಂದಿದ್ದರು. ಅಂದಿನ ರಾಜ್ಯಪಾಲರು ಹಾಗೂ ಮಾಜಿ ಮಹರಾಜ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಭೇಟಿಯಾಗಿದ್ದರು. ಅಂದಿನ ಕ್ಷಣಗಳನ್ನು ಯದುವೀರ್ ಒಡೆಯರ್ ಇಂದು ನೆನಪಿಸಿಕೊಂಡಿದ್ದಾರೆ.

 ಬ್ರಿಟನ್ ನ ರಾಣಿ ಎರಡನೇ ಎಲಿಜಬೆತ್ ಅವರು ಬೆಂಗಳೂರಿಗೆ ಭೇಟಿ ನೀಡಿ ನನ್ನ ಅಜ್ಜ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ ಅವರೊಂದಿಗೆ ಸುತ್ತಾಡಿದ್ದು, ನಮಗೆ ನೆನಪಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಹಿಂದಿನ ಲೇಖನಕಾಂಗ್ರೆಸ್ ಸೇರ್ಪಡೆಗೊಂಡ ಮಾಜಿ ಶಾಸಕ ಎಚ್.ಆರ್. ಗವಿಯಪ್ಪ
ಮುಂದಿನ ಲೇಖನಪಾತಾಳೇಶ್ವರ ದೇವಾಲಯ