ಮನೆ ರಾಜ್ಯ ಕೆಇಎ ಸಂಸ್ಥೆಯಿಂದ ಪಿಎಸ್​ಐ ಪರೀಕ್ಷೆ ನಡೆಸಲು ನಿರ್ಧಾರ: ಡಾ ಜಿ ಪರಮೇಶ್ವರ್

ಕೆಇಎ ಸಂಸ್ಥೆಯಿಂದ ಪಿಎಸ್​ಐ ಪರೀಕ್ಷೆ ನಡೆಸಲು ನಿರ್ಧಾರ: ಡಾ ಜಿ ಪರಮೇಶ್ವರ್

0

ಬೆಂಗಳೂರು: ಕೆಇಎ ಸಂಸ್ಥೆಯಿಂದ ಪಿಎಸ್ ​ಐ ಪರೀಕ್ಷೆ ನಡೆಸಲು ನಿರ್ಧಾರ ಮಾಡಿದ್ದೇವೆ ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆದೇಶ ಬಂದಿದೆ. ಇಂಡಿಪೆಂಡೆಂಟ್ ಏಜೆಸ್ಸಿಯಿಂದ ಆಗಲಿದೆ. 545 ಪಿಎಸ್​ಐ ಹುದ್ದೆಗಳ ಪರೀಕ್ಷೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದಷ್ಟು ಬೇಗನೆ ಪರೀಕ್ಷೆ ಆಗಲಿದೆ ಎಂದು ಹೇಳಿದ್ದಾರೆ.

ಆರ್​.ಡಿ ಪಾಟೀಲ್ ​ನ ಮತ್ತೊಂದು ಕರ್ಮಕಾಂಡ ಇತ್ತೀಚೆಗೆ ಬಟಾ ಬಯಲಾಗಿತ್ತು. 545 ಪಿಎಸ್ಐ ನೇಮಕಾತಿ ಬಳಿಕ 402 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮವೆಸಗುವುದಕ್ಕೆ ಪ್ಲ್ಯಾನ್ ಮಾಡಲಾಗಿತ್ತು. ಕಳೆದ ಫೆಬ್ರವರಿಯಲ್ಲಿ ನಡೆಯಬೇಕಿದ್ದ 402 ಪಿಎಸ್​ಐ ಹುದ್ದೆಗಳ ನೇಮಕಾತಿ, 402 ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಲು ಆರ್​ಡಿ ಪಾಟೀಲ್​​ ಅಕೌಂಟ್ ​ಗೆ ಕೋಟ್ಯಾಂತರ ಹಣ ಹರಿದು ಬಂದಿತ್ತು. 545 ಪಿಎಸ್ ​ಐ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಕಿಂಗ್ ಪಿನ್​​ ರುದ್ರಗೌಡ ಪಾಟೀಲ್ ಮತ್ತು ಮಹಾಂತೇಶ್ ಪಾಟೀಲ್​ಗೆ ಕಲಬುರಗಿ ಹೈಕೋರ್ಟ್​ ಪೀಠದಿಂದ ಜಾಮೀನು ಮಂಜೂರು ಮಾಡಲಾಗಿತ್ತು.  ಪ್ರಕರಣದಲ್ಲಿ ಕಿಂಗ್ ಪಿನ್ ರುದ್ರಗೌಡ ಪಾಟೀಲ್​ನ್ನು ಇದೀಗ ಕೆಇಎ ಪರೀಕ್ಷೆಯಲ್ಲಿ ಅಕ್ರಮ ಹಿನ್ನೆಲೆ ಅರೆಸ್ಟ್ ಮಾಡಲಾಗಿದೆ.