ಮನೆ Uncategorized ಮೈಸೂರು: ಹುಲಿಮರಿಗಳ ದರ್ಶನಕ್ಕೆ ಚಾಲನೆ

ಮೈಸೂರು: ಹುಲಿಮರಿಗಳ ದರ್ಶನಕ್ಕೆ ಚಾಲನೆ

0

ಮೈಸೂರು(Mysuru) : ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಏ.೨೬ರಂದು ಜನ್ಮ ತಾಳಿದ್ದ ಮೂರು ಹುಲಿ ಮರಿಗಳ ವೀಕ್ಷಣೆಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಚಾಲನೆ ನೀಡಿದರು.

ಮೃಗಾಲಯದ ಗಂಡು ಹುಲಿ ರಾಕಿ ಹಾಗೂ ಹೆಣ್ಣು ಹುಲಿ ತಾರಾಗೆ ಸದರಿ ಮರಿಗಳು ಜನಿಸಿದ್ದವು. ಅಂದಿನಿಂದ ವೀಕ್ಷಣೆಗೆ ಬಿಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ .ಟಿ. ಸೋಮಶೇಖರ್ ಅವರು ಚಾಲನೆ ನೀಡಿದರು.

ಶಾಸಕ ಎಸ್‌.ಎ.ರಾಮದಾಸ್‌, ಮಹಾಪೌರ ಶಿವಕುಮಾರ್‌, ಉಪಮಹಾಪೌರ ರೂಪ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್‌, ಮುಡಾ ಅಧ್ಯಕ್ಷ ಯಶಸ್ವಿ ಎಸ್‌.ಸೋಮಶೇಖರ್‌, ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ಕುಲಕರ್ಣಿ, ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ, ಮೃಗಾಲಯ ಪ್ರಾಧಿಕಾರದ ಸದಸ್ಯರಾದ ಗೋಕುಲ್‌ ಗೋವರ್ದನ್‌, ಜ್ಯೋತಿ ರೇಚಣ್ಣ, ವರುಣ ಕ್ಷೇತ್ರದ ಜಿಪಂ ಮಾಜಿ ಸದಸ್ಯ ಸಚ್ಚಿದಾನಂದ ಇನ್ನಿತರರು ಉಪಸ್ಥಿತರಿದ್ದರು.

ಹಿಂದಿನ ಲೇಖನಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ಫಲಪುಷ್ಪ ಪ್ರದರ್ಶನಕ್ಕೆ ವಿದ್ಯುಕ್ತವಾಗಿ ಚಾಲನೆ
ಮುಂದಿನ ಲೇಖನಲಿಂಗಾಬುಧಿ ಗ್ರಾಮದಲ್ಲಿ 1.86 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಖನಿಜ ಭವನ ಕಟ್ಟಡ ಉದ್ಘಾಟನೆ