ಮನೆ ರಾಷ್ಟ್ರೀಯ 12 ಅತಿ ವೇಗದ ರಕ್ಷಣಾ ಹಡಗುಗಳನ್ನು ವಿಯೆಟ್ನಾಂಗೆ ಹಸ್ತಾಂತರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

12 ಅತಿ ವೇಗದ ರಕ್ಷಣಾ ಹಡಗುಗಳನ್ನು ವಿಯೆಟ್ನಾಂಗೆ ಹಸ್ತಾಂತರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

0

ನವದೆಹಲಿ (New Delhi): 770 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ 12 ಅತಿ ವೇಗದ ರಕ್ಷಣಾ ಹಡಗುಗಳನ್ನು ವಿಯೆಟ್ನಾಂಗೆ ಹಸ್ತಾಂತರ ಮಾಡಲಾಯಿತು.

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಕ್ಷಣಾ ಹಡಗುಗಳನ್ನು ಹಸ್ತಾಂತರಿಸಿದರು. ಜೂ.8ರಿಂದ ವಿಯೆಟ್ನಾಂ ಪ್ರವಾಸ ಕೈಗೊಂಡಿರುವ ರಾಜನಾಥ್ ಸಿಂಗ್ ಅವರು, ಹಾಂಗ್ ಹಾ ಶಿಪ್‌ಯಾರ್ಡ್‌ನಲ್ಲಿ ಈ ಹಡಗುಗಳನ್ನು ಸಾಲದ ರೂಪದ ಯೋಜನೆಯಡಿ ವಿಯೆಟ್ನಾಂಗೆ ಹಸ್ತಾಂತರಿಸಿದರು.

ದಕ್ಷಿಣ ಚೀನಾ ಸಮುದ್ರದ ಪ್ರಾಂತ್ಯದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಾಬಲ್ಯವನ್ನು ಎದುರಿಸುವ ನಿಟ್ಟಿನಲ್ಲಿ ಭಾರತ ಮತ್ತು ವಿಯೆಟ್ನಾಂ ದೇಶಗಳ ಭದ್ರತಾ ಸಹಕಾರದ ನಡುವೆ ನಡೆದ ಈ ಬೆಳವಣಿಗೆ ಮಹತ್ವ ಪಡೆದಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ನೀಡಿದ ಸಾಲದ ಯೋಜನೆಯಡಿ 12 ಅತಿ ವೇಗದ ರಕ್ಷಣಾ ಹಡಗುಗಳ ನಿರ್ಮಾಣ ಯೋಜನೆ ಪೂರ್ಣಗೊಳಿಸಲಾಗಿದೆ. ಮೊದಲ 5 ಹಡಗುಗಳನ್ನು ಭಾರತದಲ್ಲಿ ಎಲ್ಅಂಡ್‌ಟಿ ಶಿಪ್‌ಯಾರ್ಡ್‌ನಲ್ಲಿ ನಿರ್ಮಿಸಲಾಗಿತ್ತು. ಇದೀಗ ಉಳಿದ 7 ಹಡುಗಗಳನ್ನು ಹಾಂಗ್ ಹಾ ಶಿಪ್ ಯಾರ್ಡ್‌ನಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಯು ಉಭಯ ದೇಶಗಳ ನಡುವೆ ಹೆಚ್ಚಿನ ಭದ್ರತಾ ಸಹಕಾರ ಯೋಜನೆಗಳಿಗೆ ಪೂರಕವಾಗಲಿದೆ ಎಂಬ ಭರವಸೆಯಿದೆ. ಈ ಯೋಜನೆಯು ವಿಶ್ವಕ್ಕಾಗಿ ಭಾರತದಲ್ಲಿ ನಿರ್ಮಿಸಿ (ಮೇಕ್ ಇನ್ ಇಂಡಿಯಾ- ಮೇಕ್ ಫಾರ್ ದಿ ವರ್ಲ್ಡ್ ಮಿಷನ್) ಎಂಬುದಕ್ಕೆ ಉದಾಹರಣೆಯಾಗಿದೆ ಎಂದರು.

ಹಿಂದಿನ ಲೇಖನಕಾಂಗ್ರೆಸ್ ನಲ್ಲಿ ಡಿಕೆಶಿಯದ್ದು ಏನೂ ನಡೆಯಲ್ಲ: ಹೆಚ್.ಡಿ.ಕುಮಾರಸ್ವಾಮಿ
ಮುಂದಿನ ಲೇಖನರಾಜ್ಯದಲ್ಲಿ 471 ಮಂದಿಗೆ ಕೋವಿಡ್‌ ಪಾಸಿಟಿವ್‌