ಮನೆ ರಾಷ್ಟ್ರೀಯ ಪಿಎಫ್’ಐ ಸಂಘಟನೆಯ ಟ್ವಿಟರ್, ಫೇಸ್’ಬುಕ್, ಇನ್’ಸ್ಟಾಗ್ರಾಂ ಖಾತೆ ಡಿಲೀಟ್

ಪಿಎಫ್’ಐ ಸಂಘಟನೆಯ ಟ್ವಿಟರ್, ಫೇಸ್’ಬುಕ್, ಇನ್’ಸ್ಟಾಗ್ರಾಂ ಖಾತೆ ಡಿಲೀಟ್

0

ನವದೆಹಲಿ(Newdelhi): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ಕೇಂದ್ರ ಸರ್ಕಾರವು ನಿಷೇಧಿಸಿರುವ ಬೆನ್ನಲ್ಲೇ ಆ ಸಂಘಟನೆಯ ಟ್ವಿಟರ್, ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳನ್ನು ಡಿಲೀಟ್ ಮಾಡಲಾಗಿದೆ.

ಭಾರತದಲ್ಲಿ ಮೆಟಾ ಒಡೆತನದ ಫೇಸ್‌ಬುಕ್ ಮತ್ತು ಟ್ವಿಟರ್ ಈ ಕ್ರಮ ಕೈಗೊಂಡಿವೆ. ಅಲ್ಲದೇ ಪಿಎಫ್‌ಐ ಸಂಘಟನೆಯ ಮುಖಂಡರ ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳ ಖಾತೆಯನ್ನೂ ಅಳಿಸಿ ಹಾಕಲಾಗಿದೆ.

@PFIofficial ಖಾತೆಯನ್ನು ಅಳಸಿಹಾಕಲಾಗಿದೆ. 81,000 ಬೆಂಬಲಿಗರು ಟ್ವಿಟರ್‌ನಲ್ಲಿ ಇದಕ್ಕೆ ಇದ್ದರು. ಇದನ್ನು ನಿರ್ವಹಿಸುವ ಇಸ್ಲಾಮಿಕ ಸಂಘಟನೆಯ ಮುಖಂಡರಿಗೂ 81,000 ಬೆಂಬಲಿಗರು ಇದ್ದರು.

ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯನ್ನು ಕೇಂದ್ರ ಸರ್ಕಾರವು ಐದು ವರ್ಷಗಳ ಅವಧಿಗೆ ಬುಧವಾರ ನಿಷೇಧಿಸಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ