ಮನೆ ರಾಷ್ಟ್ರೀಯ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​​ ಮತ್ತೆ 4 ದಿನ ಇಡಿ ಕಸ್ಟಡಿಗೆ:  ದೆಹಲಿ ಕೋರ್ಟ್​​​ ಆದೇಶ

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​​ ಮತ್ತೆ 4 ದಿನ ಇಡಿ ಕಸ್ಟಡಿಗೆ:  ದೆಹಲಿ ಕೋರ್ಟ್​​​ ಆದೇಶ

0

ದೆಹಲಿ: ದೆಹಲಿಯಲ್ಲಿ ಅಬಕಾರಿ ನೀತಿ ಪರಿಷ್ಕರಣೆಯಲ್ಲಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರನ್ನು ಬಂಧಿಸಲಾಗಿತ್ತು. 6 ದಿನಗಳ ಅವರು ಇಡಿ ಕಸ್ಟಡಿಗೆ ವಹಿಸಲಾಗಿದೆ. ಇಂದು ರೋಸ್ ಅವೆನ್ಯೂ ಕೋರ್ಟ್ ​​ಗೆ ಅವರನ್ನು ವಿಚಾರಣೆಗೆ ಕೆರದುಕೊಂಡು ಬರಲಾಗಿತ್ತು. ಇದೀಗ ಮತ್ತೆ 4 ದಿನ ಇಡಿ ಕಸ್ಟಡಿ ವಿಸ್ತರಣೆಯನ್ನು ಮಾಡಲಾಗಿದೆ ಎಂದು ದೆಹಲಿ ಕೋರ್ಟ್​​​ ಆದೇಶ ನೀಡಿದೆ.

ಏಪ್ರಿಲ್​​​ 1ರವರೆಗೆ ಇಡಿ ಕಸ್ಟಡಿ ಅವಧಿ ವಿಸ್ತರಣೆ ಮಾಡಲಾಗಿದೆ. ಇಡಿ ಕಸ್ಟಡಿ ಅವಧಿ ಅಂತ್ಯ ಹಿನ್ನೆಲೆ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.

ದೆಹಲಿಯಲ್ಲಿ ಅಬಕಾರಿ ನೀತಿ ಪರಿಷ್ಕರಣೆಯಲ್ಲಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್​​ ಅವರನ್ನು ಮಾರ್ಚ್​​ 22ರಂದು ಇಡಿ ಸಂಬಂಧಿಸಿತ್ತು. ಆರು ದಿನಗಳ ಇಡಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಇಂದು ಕೋರ್ಟ್​​ ಮುಂದೆ ಹಾಜರುಪಡಿಸಲಾಗಿದೆ. ಈ ವಿಚಾರಣೆಯನ್ನು ವಿಶೇಷ ಸಿಬಿಐ ನ್ಯಾಯಾಧೀಶ ಕಾವೇರಿ ಬವೇಜಾ ಅವರು ನಡೆಸಿ, 4 ದಿನ ಕಸ್ಟಡಿಯನ್ನು ವಿಸ್ತರಣೆ ಮಾಡಿದ್ದಾರೆ.

ನಿನ್ನೆ, ದೆಹಲಿ ಹೈಕೋರ್ಟ್ ಕೇಜ್ರಿವಾಲ್‌ ಗೆ ಯಾವುದೇ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿತ್ತು. ಬಂಧನವನ್ನು ಪ್ರಶ್ನಿಸಿ ಅವರ ಮನವಿಯ ಮೇಲೆ ಮಾತ್ರ ನೋಟಿಸ್ ಜಾರಿ ಮಾಡಿತ್ತು. ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಅವರು ವಿಚಾರಣೆಯ ಸಮಯದಲ್ಲಿ ಹಾಲಿ ಸಿಎಂ ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಅರವಿಂದ್​​ ಕೇಜ್ರಿವಾಲ್ ಪ್ರಯತ್ನಸುತ್ತಿದ್ದಾರೆ. ಗೋವಾದಿಂದ ಕರೆಸಲಾದ ಕೆಲವು ವ್ಯಕ್ತಿ ಹಾಗು ಏಜೆನ್ಸಿಗಳನ್ನು ವಿಚಾರಣೆ ಮಾಡಬೇಕಿದೆ ಎಂದು ಹೇಳಿದರು.

ಹೀಗಾಗಿ ಇಡಿ ಇನ್ನೂ 7 ದಿನಗಳ ಕಸ್ಟಡಿಗೆ ಕೋರಿತ್ತು. ಸಿಎಂ ಆಗಿದ್ದರೆ ಅವರು ದೋಷಮುಕ್ತರಾಗುವುದಿಲ್ಲ, ಸಿಎಂಗೆ ವಿಭಿನ್ನ ಮಾನದಂಡಗಳಿಲ್ಲ, ಸಿಎಂ ಅನ್ನು ಬಂಧಿಸುವ ಹಕ್ಕು ಸಾಮಾನ್ಯ ವ್ಯಕ್ತಿಗಿಂತ ಭಿನ್ನವಾಗಿಲ್ಲ ಎಂದು ಹೇಳಿದ್ದಾರೆ. ನಿನ್ನೆಯಷ್ಟೇ ಇಡಿ ಎಎಪಿಯ ಗೋವಾ ಘಟಕದ ಮುಖ್ಯಸ್ಥ ಅಮಿತ್ ಪಾಲೇಕರ್ ಮತ್ತು ಪಕ್ಷದ ಇತರ ಕೆಲವು ನಾಯಕರನ್ನು ವಿಚಾರಣೆಗೆ ಕರೆಸಿತ್ತು.

ಹಿಂದಿನ ಲೇಖನವಸಿಷ್ಠ ಸಿಂಹ ನಟನೆಯ “ವಿಐಪಿ’ ಚಿತ್ರದ ಫ‌ಸ್ಟ್‌ ಲುಕ್‌ ಬಿಡುಗಡೆ
ಮುಂದಿನ ಲೇಖನಮೈಸೂರು ಕೊಡಗು ಲೋಕಸಭಾ ಕ್ಷೇತ್ರ : ಮೊದಲ ದಿನ ಇಬ್ಬರು ಉಮೇದುವಾರಿಕೆ