ಮನೆ ಅಪರಾಧ ಜಪ್ತಿ ಮಾಡಿದ್ದ ಬೈಕ್ ಮರಳಿಸಲು ಲಂಚಕ್ಕೆ ಬೇಡಿಕೆ: ದೇವನಹಳ್ಳಿ ಠಾಣೆ ಎಎಸ್’ಐ ಅಮಾನತು

ಜಪ್ತಿ ಮಾಡಿದ್ದ ಬೈಕ್ ಮರಳಿಸಲು ಲಂಚಕ್ಕೆ ಬೇಡಿಕೆ: ದೇವನಹಳ್ಳಿ ಠಾಣೆ ಎಎಸ್’ಐ ಅಮಾನತು

0

ಬೆಂಗಳೂರು(Bengaluru): ಅಕ್ರಮವಾಗಿ ಜಪ್ತಿ ಮಾಡಿದ್ದ ಬೈಕ್ ಮರಳಿಸಲು 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ದೇವನಹಳ್ಳಿ ಠಾಣೆ ಎಎಸ್’ಐನ್ನು ಅಮಾನತು ಮಾಡಿ ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಆದೇಶ ಹೊರಡಿಸಿದ್ದಾರೆ.

ಎಎಸ್’ಐ ಗೋಪಾಲಕೃಷ್ಣ ಅಮಾನತುಗೊಂಡವರು.

ಕೌಟುಂಬಿಕ ಕಲಹ ಪ್ರಕರಣ ಸಂಬಂಧ, ಕಾನೂನು ಬಾಹಿರವಾಗಿ ಬೈಕ್ ಜಪ್ತಿ ಮಾಡಿದ್ದನ್ನು ಕೊಡೋದಕ್ಕೆ 15 ಸಾವಿರ ಲಂಚಕ್ಕೆ ಬೇಡಿಕೆಯನ್ನು ಇಟ್ಟಿದ್ದರು. ಈ ಸಂಬಂಧ ಪೊಲೀಸ್ ಕಂಟ್ರೋಲ್ ರೂಮ್’ಗೆ ಕರೆ ಮಾಡಿದ್ದಂತ ಸಂತ್ರಸ್ತ ವ್ಯಕ್ತಿ, ತಮ್ಮ ಅಳಲು ತೋಡಿಕೊಂಡಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತ ಡಿಸಿಪಿ ಅನೂಪ್ ಶೆಟ್ಟಿ, ತನಿಖೆಗೆ ಸೂಚಿಸಿದ್ದರು. ಆಂತರಿಕ ವಿಚಾರಣೆ ನಡೆಸಿದ ಬಳಿಕ, ಲಂಚಕ್ಕೆ ಬೇಡಿಕೆ ಇಟ್ಟಿದ್ದು ದೃಢಪಟ್ಟ ಹಿನ್ನಲೆಯಲ್ಲಿ ಎಎಸ್’ಐ ಗೋಪಾಲಕೃಷ್ಣ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಹಿಂದಿನ ಲೇಖನಪಿಎಸ್’ಐ ಅಕ್ರಮ ನೇಮಕಾತಿ ಪ್ರಕರಣದ ಆರೋಪಿ ಆರ್.ಡಿ. ಪಾಟೀಲ ಪರಾರಿ
ಮುಂದಿನ ಲೇಖನಬಜೆಟ್ ದರದಲ್ಲಿ ಉತ್ತಮ ಫೀಚರ್ ಟ್ಯಾಬ್ಲೆಟ್ ಪರಿಚಯಿಸಿದ ನೋಕಿಯಾ