ಮನೆ ಆರೋಗ್ಯ ಬೇಸಿಗೆಯಲ್ಲಿ ಅನುಸರಿಸಬೇಕಾದ ಆರೋಗ್ಯ ಕ್ರಮಗಳು

ಬೇಸಿಗೆಯಲ್ಲಿ ಅನುಸರಿಸಬೇಕಾದ ಆರೋಗ್ಯ ಕ್ರಮಗಳು

0

ಬೇಸಿಗೆ ವೇಳೆ ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕಾಗಿರುವುದು ಅತಿ ಮುಖ್ಯ.
ಬೇಸಿಗೆಯಲ್ಲಿ ಅನುಸರಿಸಬೇಕಾದ ಕೆಲವು ಮುಂಜಾಗ್ರತೆಯ ಕ್ರಮಗಲಕ ಮಾಹಿತಿ ಇಲ್ಲಿದೆ.

  • ಬೇಸಿಗೆ ವೇಳೆ ಮನೆಯಿಂದ ಹೊರಗಡೆ ಹೋಗುವಾಗ ಜೊತೆಯಲ್ಲಿ ತಪ್ಪದೇ ಶುದ್ದ ಕುಡಿಯುವ ನೀರನ್ನು ತೆಗೆದುಕೊಂಡು ಹೋಗಬೇಕು. * ಸಡಿಲವಾದ ತೆಳು ಬಣ್ಣದ ಹತ್ತಿ ಬಟ್ಟೆಯನ್ನು ಧರಿಸಬೇಕು.
  • ಆಗಾಗ್ಗೆ ಉಪ್ಪು, ಸಕ್ಕರೆ ಮಿತ್ರಿತ ನೀರನ್ನು ಕುಡಿಯಿರಿ ಮತ್ತು ಹಣ್ಣಿನ ರಸ, ಮಜ್ಜಿಗೆ/ಎಳನೀರು ಕುಡಿಯಿರಿ.
  • ಹತ್ತಿಯ ನುಣುಪಾದ ಬಟ್ಟೆ/ಟಿಶ್ಯು ಕರವಸ್ತ್ರದಿಂದ ಬೆವರನ್ನು ಒರೆಸಿರಿ.
  • ಬೆಚ್ಚಗಿನ, ಮಸಾಲೆ ರಹಿತ ಶುದ್ಧ ಸಾತ್ವಿಕ ಆಹಾರ ಸೇವಿಸಿರಿ.
  • ಗಾಳಿಯಾಡುವಂತಿರುವ ಪಾದರಕ್ಷೆಗಳನ್ನು ಧರಿಸಿರಿ.

  • ಜಾಗ್ರತೆ ವಹಿಸಬೇಕಾದ ಕ್ರಮಗಳು:
  • ಅತಿ ಬಿಗಿಯಾದ ಸಿಂಥೆಟಿಕ್ ಬಟ್ಟೆಗಳನ್ನು ಧರಿಸಬಾರದು.
  • ಸೋಡಾ ಇತ್ಯಾದಿ ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ಕುಡಿಯಬಾರದು.
  • ಕಾಫೀ/ಟೀ ಸಕ್ಕರೆ ಅಂಶವುಳ್ಳ ಪಾನೀಯಗಳನ್ನು ಅತಿಯಾಗಿ ಸೇವಿಸಬಾರದು.
  • ಉಷ್ಣತೆಯಿಂದ ಸುಸ್ತಾದ ವ್ಯಕ್ತಿಯನ್ನು ತುಂಬಾ ತಣ್ಣಗಿನ/ಶಿಥಲೀಕರಿಸಿದ ನೀರಿನಿಂದ ಒರೆಸಬೇಡಿ.
ಹಿಂದಿನ ಲೇಖನದ್ವಾದಶ ರಾಶಿಗಳ ಭವಿಷ್ಯ
ಮುಂದಿನ ಲೇಖನವರ್ಕ್‌ ಫ್ರಮ್‌ ಹೋಮ್ ನಲ್ಲಿರುವವರಿಗಾಗಿ ಇಲ್ಲಿವೆ ಫಿಟ್ನೆಸ್‌ ಸೂತ್ರ