ಮನೆ ಅಪರಾಧ ಕರ್ತವ್ಯ ಲೋಪ: ಕೆ.ಆರ್. ಪುರ ಇನ್‌ಸ್ಪೆಕ್ಟರ್ ಎಚ್‌.ಎಲ್. ನಂದೀಶ್ ಅಮಾನತು

ಕರ್ತವ್ಯ ಲೋಪ: ಕೆ.ಆರ್. ಪುರ ಇನ್‌ಸ್ಪೆಕ್ಟರ್ ಎಚ್‌.ಎಲ್. ನಂದೀಶ್ ಅಮಾನತು

0

ಬೆಂಗಳೂರು(Bengaluru): ಟಾನಿಕ್ ಬಾರ್ ಆ್ಯಂಡ್ ರೆಸ್ಟೋರೆಂಟ್ ನಿತ್ಯವೂ ತಡರಾತ್ರಿಯವರೆಗೂ ವಹಿವಾಟು ನಡೆಸುತ್ತಿದ್ದರೂ ರೆಸ್ಟೋರೆಂಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳದ ಕೆ.ಆರ್. ಪುರ ಇನ್‌ಸ್ಪೆಕ್ಟರ್ ಎಚ್‌.ಎಲ್. ನಂದೀಶ್ ಅವರನ್ನು ಸೇವೆಯಿಂದ ವಜಗೊಳಿಸಲಾಗಿದೆ.

ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ರಾತ್ರಿ 1 ಗಂಟೆಯವರೆಗೆ ವಹಿವಾಟು ನಡೆಸಲು ಅವಕಾಶ ನೀಡಿದೆ. ಆದರೆ ಟಾನಿಕ್ ಬಾರ್ ಆ್ಯಂಡ್ ರೆಸ್ಟೋರೆಂಟ್ ತಡರಾತ್ರಿ 2 ಗಂಟೆಯವರೆಗೂ ತೆರೆದಿತ್ತು. ಈ ಹಿನ್ನೆಲೆಯಲ್ಲಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೇ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆ.ಆರ್. ಪುರ ಇನ್‌ಸ್ಪೆಕ್ಟರ್ ಎಚ್‌.ಎಲ್. ನಂದೀಶ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸಿಸಿಬಿ ಪೊಲೀಸರು ದಾಳಿ ನಡೆಸಿ ಮಾಲೀಕರ ವಿರುದ್ಧ ಪ್ರಕರಣ ದೂರು ದಾಖಲಿಸಿದ್ದು, ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದರು.

ಹಿಂದಿನ ಲೇಖನಏಕರೂಪ ನಾಗರಿಕ ಸಂಹಿತೆ: ದಂಡದೊಂದಿಗೆ ಬಿಜೆಪಿ ವಕ್ತಾರನ ಅರ್ಜಿ ವಜಾಗೊಳಿಸಲು ಸುಪ್ರೀಂ ಕೋರ್ಟ್’ಗೆ ಕೇಂದ್ರದ ಮನವಿ
ಮುಂದಿನ ಲೇಖನನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡುಕೋಣ ಬೇಟೆಯಾಡಿದ್ದ ಇಬ್ಬರ ಬಂಧನ- ಏಳು ಜನ ಪರಾರಿ