ಭೋಪಾಲ್: ಹೆಡ್ ಫೋನ್ ಹಾಕಿ ರೈಲು ಹಳಿಯ ಮೇಲೆ ಕುಳಿತ್ತಿದ್ದ ವಿದ್ಯಾರ್ಥಿಯೋರ್ವನಿಗೆ ರೈಲೊಂದು ಡಿಕ್ಕಿ ಹೊಡೆದು ಯುವಕ ಮೃತಪಟ್ಟ ದಾರುಣ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಬುಧವಾರ (ಅ.30) ಸಂಭವಿಸಿದೆ.
ಘಟನೆಯಲ್ಲಿ ಬಿಬಿಎ ವಿದ್ಯಾರ್ಥಿ ಮನರಾಜ್ ತೋಮರ್ ಮೃತ ದುರ್ದೈವಿ ಎನ್ನಲಾಗಿದೆ.
ಮನರಾಜ್ ಹಾಗೂ ಆತನ ಸ್ನೇಹಿತ ಇಬ್ಬರೂ ರೈಲು ಹಳಿಯ ಮೇಲೆ ಕುಳಿತು ಮೊಬೈಲ್ ನಲ್ಲಿ ಏನೋ ಹುಡುಕಾಡುತ್ತಿದ್ದರು ಎನ್ನಲಾಗಿದೆ ಘಟನೆ ವೇಳೆ ಮನರಾಜ್ ಹೆಡ್ ಫೋನ್ ಹಾಕಿಕೊಂಡಿದ್ದು ಏರು ಧ್ವನಿಯಲ್ಲಿ ಸಂಗೀತ ಕೇಳುತ್ತಿದ್ದ ಎನ್ನಲಾಗಿದೆ ಈ ವೇಳೆ ಅದೇ ಹಳಿಯಲ್ಲಿ ಬಂದ ರೈಲು ಮನರಾಜ್ ಗೆ ಡಿಕ್ಕಿ ಹೊಡೆದಿದೆ ಪರಿಣಾಮ ಮನರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ. ಕುಟುಂಬದ ಏಕೈಕ ಪುತ್ರನಾಗಿದ್ದ ಮನರಾಜ್ ಇದೀಗ ಆತನ ಅಗಲಿಕೆಯಿಂದ ಕುಟುಂಬ ಕಂಗಾಲಾಗಿದೆ.