ಶ್ರೀರಂಗಪಟ್ಟಣ: ಚಿತ್ರನಟ ದಿ. ಅಂಬರೀಷ್ ಅವರ 6ನೇ ಪುಣ್ಯಸ್ಮರಣೆಯ ನೆನಪಿನಾರ್ಥ 30 ಪಟುಗಳ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ತಾಲೂಕಿನ ಟಿ. ಎಂ. ಹೊಸೂರು ಗೇಟ್ ಮಹಾಕಾಳಿ ದೇವಾಲಯದ ಬಳಿ ಸೋಮವಾರ ನಡೆಯಿತು.
ಅಂಬರೀಷ್ ಅಭಿಮಾನಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಪಂದ್ಯಾವಳಿಗೆ ಕ್ಷೇತ್ರದ ಮಾಜಿ ಶಾಸಕಿ ವಿಜಯಲಕ್ಷ್ಮಮ್ಮ ಬಂಡಿಸಿದ್ದೇಗೌಡ, ಅಂಬಿ ಆಪ್ತ ಮತ್ತು ಹಿರಿಯ ಮುಖಂಡ ಎಸ್. ಎಲ್. ಲಿಂಗರಾಜು ಮಟ್ಟಿಪೂಜೆ ನೆರವೇರಿಸಿ ಚಾಲನೆ ನೀಡಿದರು.














