ಬೆಂಗಳೂರು: ಕಣ್ಮರೆಯಾಗಿದ್ದ ದೇವಾಲಯ ನೃತ್ಯ ಮತ್ತೆ ಮುನ್ನಲೆಗೆ ಬರುತ್ತಿದೆ. 42 ವರ್ಷದ ಬಳಿಕ ಬೆಂಗಳೂರಿನಲ್ಲಿ ದೇವಾಲಯ ನೃತ್ಯ ಕಾರ್ಯಕ್ರಮ ನಡೆಯುತ್ತಿದೆ. ಡಿಸೆಂಬರ್ 30 ರಂದು ವೈಯಾಲಿಕಾವಲ್ನ ಚೌಡಯ್ಯ ಸ್ಮಾರಕ ಭವನದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಈ ದೇವಾಲಯ ನೃತ್ಯವನ್ನು ದೇವದಾಸಿಯರು ಮಾಡುತ್ತಿದ್ದರು. ಆದರೆ ಈಗ ರಾಜ್ಯದಲ್ಲಿ ದೇವದಸಿ ಪದ್ಧತಿ ನಿಷೇಧಿಸಲಾಗಿದೆ.
ನರ್ತಕಿ ವೀಣಾ ಮೂರ್ತಿ ವಿಜಯ ಎಂಬುವರು 1981ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಮೂರು ಗಂಟೆಗಳ ಕಾಲ ದೇವಾಲಯ ನೃತ್ಯವನ್ನು ಮಾಡಿದ್ದರು. ಈಗ ಕೂಚಿಪುಡಿ ಮತ್ತು ಭರತನಾಟ್ಯ ನೃತ್ಯಗಾರ್ತಿಯಾಗಿರುವ ವೀಣಾ ಅಷ್ಟೊಂದು ನೃತ್ಯ ಪ್ರದರ್ಶನಗಳನ್ನು ನೀಡುತ್ತಿಲ್ಲ. ವೀಣಾ ಅವರು ತಮ್ಮ ವಿದ್ಯಾರ್ಥಿನಿ ನರ್ತಕಿ ಸಂಗೀತಾ ಫಣೀಶ್‌ಗೆ ಅವರಿಗೂ ಕೂಡ ದೇವಾಲಯದ ನೃತ್ಯ ವಿದ್ಯೆಯನ್ನು ಕಲಿಸಿದ್ದಾರೆ.
ಕೂಚಿಪುಡಿ ವಾದನವನ್ನು ಪುನರುಜ್ಜೀವನಗೊಳಿಸಲು ಇದು ಸರಿಯಾದ ಸಮಯ. ಇತ್ತೀಚಿಗೆ ಯುವಕರಲ್ಲಿ ಭಾರತೀಯ ಪರಂಪರೆಯ ಬಗ್ಗೆ ಆಸಕ್ತಿ ಬೆಳೆಯುತ್ತಿದೆ. ಇದು ಸಂತಸದ ಸಂಗತಿ ಎಂದು ವೀಣಾ ಹೇಳಿದರು.
ದೇವಾಲಯದ ನೃತ್ಯ ಮಾಡುವ ದೇವಾಸಿಯರ ಬಗ್ಗೆ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಈ ದೇವದಾಸಿಯರು ಸಂಗೀತ, ಸಾಹಿತ್ಯ ಮತ್ತು ವೇದಗಳಲ್ಲಿ ಪಾರಂಗತರಾಗಿದ್ದರು. ಮತ್ತು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮವು ದೇವಾಲಯ ನೃತ್ಯವನ್ನು ಬೆಳಸಲು ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದರು.
ದೇವಾಲಯ ನೃತ್ಯಕ್ಕೆ ‘ನವಸಂಧಿ’ ಎಂದೂ ಕರೆಯುತ್ತಾರೆ. ಈ ನವಸಂಧಿಗಳ ಬಗ್ಗೆ ದಾಖಲೆಗಳಿವೆ. ಇದನ್ನು ದಕ್ಷಿಣ ಭಾರತದಲ್ಲಿ ದೇವದಾಸಿಯರು ಗುರುತಿಸಿದ್ದರು. ನಟ್ಟುವನಾರ್ (ನೃತ್ಯಕ್ಕಾಗಿ ಸಂಗೀತ ಮೇಳವನ್ನು ನಡೆಸುವವರು) ಭುದ್ದ ದೇವ್ ಅವರು ತಮ್ಮ ಪೂರ್ವಜರಿಂದ ಈ ದಾಖಲೆಗಳನ್ನು ಸಂಪಾದಿಸಿಕೊಂಡಿದ್ದರು. “ದೇವದಾಸಿಯರು ಬ್ರಹ್ಮೋತ್ಸವದಂತಹ ಉತ್ಸವಗಳು, ಸಮಾರಂಭಗಳಲ್ಲಿ ಮತ್ತು ದೇವರ ಮೆರವಣಿಗೆಯಲ್ಲಿ ಈ ನೃತ್ಯವನ್ನು ಮಾಡುತ್ತಿದ್ದರು ಎಂದರು.
ದೇವದಾಸಿಯರು ನೃತ್ಯಕ್ಕೂ ಮೊದಲು ಎಂಟು ದಿಕ್ಕಿನ ದೇವತೆಗಳಿಗೆ ಪೂಜೆ ಸಲ್ಲಿಸಿ ನೃತ್ಯ ಮಾಡಲು ಆರಂಭಿಸುತ್ತಾರೆ. ನವಸಂಧಿ ಎಂದರೆ ಗೊತ್ತುಪಡಿಸಿದ ಪ್ರದೇಶ. ‘ನವಸಂಧಿ’ ಒಂಬತ್ತು ಕ್ಷೇತ್ರಗಳನ್ನು ಸೂಚಿಸುತ್ತದೆ ಎಂದು ವೀಣಾ ವಿವರಿಸುತ್ತಾರೆ.
ಭಕ್ತಿ ನೃತ್ಯವು ವಿಶೇಷ ಸಂದರ್ಭಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ದೇವದಾಸಿಯರು ಪ್ರತಿದಿನ ದೇವಾಲಯದ ಹಾಡುಗಳಿಗೆ ನೃತ್ಯ ಮಾಡುತ್ತಿದ್ದಾರೆ. ಅವರ ಕಲೆಯು ದೇವರಿಗಾಗಿ ಮೀಸಲಾಗಿದೆ ಎಂದರು.