ಎದ್ದೇಳು ಮಂಜುನಾಥ ಏಳು ಬೆಳಗಾಯಿತು…
ಧರ್ಮ ದೇವತೆಗಳು ನಿನ್ನ ದರುಶನಕೆ ಕಾದಿಹರು..
ಅಣ್ಣಪ್ಪ ಸ್ವಾಮಿಯೂ ನಿನ್ನ ಆಜ್ಞೆಗೆ ನಿಂತಿಹನು
ಎದ್ದೇಳು ಮಂಜುನಾಥ ಎದ್ದೇಳು…||
ಮುನಿಗಣಂಗಳು ಸ್ತೋತ್ರ ಮಾಡುತಿಹರು…
ದೇವಾದಿದೇವತೆಗಳೂ ನಿನ್ನ ದರುಶನಕೇ ಕಾದಿಹರು …
ಎದ್ದೇಳು ಮಂಜುನಾಥ ಎದ್ದೇಳು…||
ಮೃಗರಾಜನೂ ನಿನ್ನ ದರುಶನಕೇ ಬಂದಿಹನು…
ಗಜರಾಜನು ನಿನಗೇ ಚಾಮರವ ಬೀಸುತಿಹನು…
ನಿನ್ನ ಆಭರಣಗಳಿಗಾಗಿ ಆದಿಶೇಷನೂ… ನಿನ್ನ ಸೇರಲೂ ಕಾತರಿಸುತಿಹನು
ಎದ್ದೇಳು ಮಂಜುನಾಥ ಎದ್ದೇಳು……||
ಕೋಗಿಲೆಗಳೂ, ಕೋಗಿಲೆಗಳೂ, ಸುಸ್ವರದಿ ಗಾನಮೊಳಗುತಿಹವೂ…
ಸರಿಗಪದ… ಸದಪಗಪ…. ದಪಗಸರಿ… ಗರಿಸದಸ…
ಕೋಗಿಲೆಗಳು ಸುಸ್ವರದಿ ಗಾನ ಮೊಳಗುತಿಹವು…
ಸವಿಮಾತಿನ ಅರಗಿಳಿಯೂ ನಿನ್ನ ಧ್ಯಾನದಲಿಹುದೂ …
ಪಾರಿವಾಳಗಳು ನಿನ್ನ ದರುಶನಕೆ ಕಾದಿಹವೂ………
ಹೆಗ್ಗಡೆಯ ದಂಪತಿಗಳು ನಿನ್ನಯ ಸೇವೆಗೆ ಕಾತರಿಸುತಿಹರು…
ತಡವು ಏತಕೆ ಪ್ರಭುವೇ ದರುಶನವ ನೀಡೇಳು
ಎದ್ದೇಳು ಮಂಜುನಾಥ ಎದ್ದೇಳು…||
ನೇತ್ರಾವತಿಯಲ್ಲಿ ಮಿಂದು ಜನರೂ ವಿಧವಿಧದೀ ಸೇವೆಗಳ ಗೈಯುತಿಹರೂ…
ಸರ್ವರಕ್ಷಕ… ಸರ್ವರಕ್ಷಕನು ನೀನು ದರುಶನವಾ ನೀಡೇಳೂ …
ವಿಪ್ರರೆಲ್ಲರೂ ಕೂಡಿ ವೇದಘೋಷಿಸುತಿಹರೂ…
ವಿಪ್ರರೆಲ್ಲರೂ ಕೂಡಿ ವೇದಘೋಷಿಸುತಿಹರೂ…
ಮೋಕ್ಷವನು ನೀಡೇಳು…
ರವಿಯ ಕಿರಣವೂ ನಿನ್ನ ಮಹಾದ್ವಾರವನು ಬೆಳಗುತಿಹುದೂ…
ದರುಶನವ ನೀಡೇಳೂ… ಏಳೂ ಬೆಳಗಾಯಿತು ….