ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಟಿ ಬೇರಿಲ್ಲ….
ಶಿವನಾಮಕೆ ಸಾಟಿ ಬೇರಿಲ್ಲ
ಶಿವ ಭಕ್ತನಿಗೆ ನರಕವದಿಲ್ಲ
ಜನುಮಜನುಮಗಳ ಕಾಟವದಿಲ್ಲ….
ಅನ್ನದಾನವ ತೊರೆಯದಿರು
ನಾನು ನನ್ನದು ಎನ್ನದಿರು
ಉನ್ನತಿ ಸಾದಿಸೆ ಹಗಲಿರುಲು
ದೀನನಾಥನ ಮರೆಯದಿರು
ಭೋಗಭಾಗ್ಯದ ಬಲೆಯೊಳಗೆ
ಬಳಲಿ ಬಾಡದೆ ಇಳೆಯೊಳಗೆ
ಕಾಯಕ ಮಾಡುತ ಎಂದೆಂದು
ಆತ್ಮಾನಂದವ ಸವಿಯುತಿರು
ದಾನವೆ ಜಗದೊಳು ತಪವಯ್ಯ
ಧ್ಯಾನವೆ ಘನತರ ಜಪವಯ್ಯ
ಅಪಕಾರವ ನೀ ಮಾಡಿದರೆ
ಕೈಲಾಸವದು ಸಿಗದಯ್ಯ
Saval TV on YouTube