ಮನೆ ಅಪರಾಧ ಗ್ರಾಹಕರ ಅನುಮತಿಯಿಲ್ಲದೇ 1.89 ಕೋಟಿ ರೂ. ಹಣ ವರ್ಗಾವಣೆ: ಬ್ಯಾಂಕ್ ಮ್ಯಾನೇಜರ್, ಸಹಾಯಕ ಅಮಾನತು

ಗ್ರಾಹಕರ ಅನುಮತಿಯಿಲ್ಲದೇ 1.89 ಕೋಟಿ ರೂ. ಹಣ ವರ್ಗಾವಣೆ: ಬ್ಯಾಂಕ್ ಮ್ಯಾನೇಜರ್, ಸಹಾಯಕ ಅಮಾನತು

0

ದೇವನಹಳ್ಳಿ: ಬ್ಯಾಂಕ್ ಮ್ಯಾನೇಜರ್​ ಹಾಗೂ ಬ್ಯಾಂಕ್ ಸಹಾಯಕರೊಬ್ಬರು ಗ್ರಾಹಕರ ಖಾತೆಯಿಂದ ಸುಮಾರು 1.89 ಕೋಟಿ ರೂ.ಗಳನ್ನು ಅವರ ಅನುಮತಿಯಿಲ್ಲದೆ ಬೇರೆ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Join Our Whatsapp Group

ಬ್ಯಾಂಕ್ ಮ್ಯಾನೇಜರ್ ಗಣೇಶ್ ಬಾಬು ಮತ್ತು ಜಿತೇಂದ್ರ ಕುಮಾರ್ ಚನ್ನರಾಯಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.

ಗಣೇಶ್ ಬಾಬು ಮತ್ತು ಜಿತೇಂದ್ರ ಕುಮಾರ್ ಅವರು ಜೂನ್ 3 ರಿಂದ ಜುಲೈ 17 ರ ನಡುವೆ ಆರ್‌ ಟಿಜಿಎಸ್ ವಹಿವಾಟಿನ ಮೂಲಕ ಗ್ರಾಹಕರಿಗೆ ತಿಳಿಯದಂತೆ ಹಲವಾರು ಖಾತೆಗಳಿಂದ 1,88,75,000 ರೂ.ಗಳನ್ನು ಇತರ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂದು ಚನ್ನರಾಯಪಟ್ಟಣ ಠಾಣೆ ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತರಾದ ರಾಮಕ್ಕ, ಪಾಪಮ್ಮ, ಚೈತ್ರಾ ಯಾದವ್, ಕಿಶೋರ್ ಮತ್ತು ವೆಂಕಟಪ್ಪ ಅವರ ಖಾತೆಯಿಂದ ಹಣ ವರ್ಗಾವಣೆಗೊಂಡಿದೆ. ಹಣ ವರ್ಗಾವಣೆಗೊಂಡ ಮಾಹಿತಿ ತಿಳಿಯುತ್ತಿದ್ದಂತೆಯೇ ಅವರು ಬ್ಯಾಂಕ್‌ ಗೆ ಧಾವಿಸಿದ್ದರು.

ಗ್ರಾಹಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಗಣೇಶ್ ಬಾಬು ಮತ್ತು ಜಿತೇಂದ್ರ ಕುಮಾರ್ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ಆರೋಪಿಗಳ ವಿರುದ್ಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಬಿಜೆಪಿಯವರು ಮಾನಸಿಕ ಅಸ್ವಸ್ಥತೆ ತೋರಿಸುತ್ತಿದ್ದಾರೆ: ಮಧು‌ ಬಂಗಾರಪ್ಪ
ಮುಂದಿನ ಲೇಖನಕೃಷ್ಣಾ ನದಿಗೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರು: ನದಿಪಾತ್ರಕ್ಕೆ ತೆರಳದಂತೆ ಸಾರ್ವಜನಿಕರಿಗೆ ಸೂಚನೆ