ಮನೆ ದೇವರ ನಾಮ ಶರಧಿ ಮರ್ದನದಲ್ಲಿ ಸಿರಿದೇವಿ ಜನಿಸಿದಳು

ಶರಧಿ ಮರ್ದನದಲ್ಲಿ ಸಿರಿದೇವಿ ಜನಿಸಿದಳು

0

ಸಾಹಿತ್ಯ :- ಪುರಂದರ ದಾಸರು

ಶರಧಿ ಮರ್ದನದಲ್ಲಿ ಸಿರಿದೇವಿ ಜನಿಸಿದಳು

ಕಮಲದ ವನಮಾಲೆ ಕರದಿ ಪಿಡಿದಿಹಳು||

ಗರುಡನ್ನ ಒಲ್ಲೆನಮ್ಮ ಗಗನಕ್ಹಾರುವನ

ಉರಗನ್ನ ಒಲ್ಲೆನಮ್ಮ ಧರೆಯ ಪೊತ್ತವನ

ಕಾಲ ಯಮನನ ಒಲ್ಲೆ ಕೋಣನೇರ್ದವನ

ಜ್ವಾಲಾಗ್ನಿಯ ಒಲ್ಲೆ ವಹ್ನಿ ಸುಡುವವನ ||

ಸೂರ್ಯನ್ನ ಒಲ್ಲೆನಮ್ಮ ಸುತ್ತ ಸುಡುವವನ

ವಾಯುದೇವರನೊಲ್ಲೆ ಗಾಳಿ ಬೀಸುವನ

ಇಂದ್ರನ್ನ ಒಲ್ಲೆನಮ್ಮ ಮೈಯೆಲ್ಲಾ ಕಣ್ಣವನ

ಚಂದ್ರನ್ನ ಒಲ್ಲೆನಮ್ಮ ಕಳೆಗುಂದಿದವನ ||

ಮತ್ಸ್ಯನ್ನ ಒಲ್ಲೆನಮ್ಮ ಜಲದೊಳಗಡಗಿಹನ

ಕೂರ್ಮನ್ನ ಒಲ್ಲೆನಮ್ಮ ಗಿರಿಯ ಪೊತ್ತವನ

ವರಹನ್ನ ಒಲ್ಲೆನಮ್ಮ ನೆಲವ ಬಗೆದವನ

ನರಹರಿಯ ಒಲ್ಲೆನಮ್ಮ ಕರುಳ ಬಗೆದವನ ||

ವಾಮನನ್ನ ಒಲ್ಲೆನಮ್ಮ ದಾನ ಬೇಡ್ದವನ

ಪರಶುರಾಮನ್ನ ಒಲ್ಲೆನಮ್ಮ ತಾಯ ಕೊಂದವನ

ರಾಮನ್ನ ಒಲ್ಲೆನಮ್ಮ ಶಬರಿ ಎಂಜಲುಂಡವನ

ಕೃಷ್ಣನ್ನ ಒಲ್ಲೆನಮ್ಮ ಬೆಣ್ಣೆ ಕದ್ದವನ ||

ಬೌದ್ಧನ್ನ ಒಲ್ಲೆನಮ್ಮ ಬೆತ್ತಲೆ ನಿಂತವನ

ಕಲ್ಕೀನ ಒಲ್ಲೆನಮ್ಮ ತೇಜಿಗೇರ್ದವನ

ವಾಸುಕಿ ಶಯನ ಶ್ರೀ ಪುರಂದವಿಠಲನಿಗೆ

ಮಂದಾರ ಹೂವಿನ ಮಾಲೆ ಹಾಕಿದಳು ||

ಶರಧಿ ಮರ್ದನದಲ್ಲಿ ಸಿರಿದೇವಿ ಜನಿಸಿದಳು

ಕಮಲದ ವನಮಾಲೆ ಕರದಿ ಪಿಡಿದಿಹಳು ||

ಹಿಂದಿನ ಲೇಖನಮೈಸೂರು ನಗರಕ್ಕಾಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ
ಮುಂದಿನ ಲೇಖನಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಈ ಯೋಗಾಸನ ಮಾಡಿ…!