ಮನೆ ದೇವರ ನಾಮ ನಿನ್ನ ಒಲುಮೆಗೆ ನಾನು ಈಡೇನೋ ರಂಗ

ನಿನ್ನ ಒಲುಮೆಗೆ ನಾನು ಈಡೇನೋ ರಂಗ

0

ನಿನ್ನ ಒಲುಮೆಗೆ ನಾನು ಈಡೇನೋ ರಂಗ ।।ಪ||

ಸಣ್ಣವನು ನಾನಯ್ಯ ಪನ್ನಗಾಚಲವಾಸ ।।ಆ.ಪ|।।

ಅಜಿತನಾಮಕ ನೀನು ಅಲ್ಪಶಕ್ತನು ನಾನು ।

ಕುಜನದೂಷಕ ನೀನು ಅವರ ಮಿತ್ರನು ನಾನು ।।

ವಜ್ರದ ಸ್ತ್ರೀಯರ ಮಾನವ ಸೂರೆಗೊಂಡ ಸ್ವಾಮೀ ।

ಅಜನ ಪೆತ್ತ ನಿನಗೆ ಸರಿ ಯಾರು ಪೇಳಯ್ಯ ।।೧।।

ಅನೇಕ ಅದ್ಭುತ ಚರಿತ್ರ ಪಿಡಿದೆ ಹೇಸಿಗೆ ಮಾರ್ಗ ।

ಅನೇಕ ಭಕ್ತರ ಪೋಷಕ ನಾನವರ ದೂಷಕ ।।

ಅನೇಕ ಬಾಹುಗಳು ಮತ್ತನೇಕ ಪಾದಗಳಯ್ಯ ।

ಅನೇಕ ದಿವ್ಯಾಭರಣ ವಿಶ್ವರೂಪ ನಿನಗೆ ।।೨।।

ಪರಮಪಾವನ ನೀನು ದುಷ್ಟ ತರಳನು ನಾನು ।

ಕರುಣಾಬ್ದಿಯು ನೀನು ಕಠಿಣ ಚಿತ್ತ ನಾನು ।।

ಶರಣೆಂಬೆ ಗಿರಿರಾಯ ನಿನ್ನ ಪೋಲುವರುಂಟೆ ।

ಮರಳಿ ಪುಟ್ಟದೆ ಮಾಡು ತಂದೆ ಪುರಂದರ ವಿಠ್ಠಲ ।।೩।।

ಹಿಂದಿನ ಲೇಖನಬೆಂಗಳೂರಿನ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಉಗ್ರರಿಗೆ ಏಳು ವರ್ಷ ಜೈಲು ಶಿಕ್ಷೆ
ಮುಂದಿನ ಲೇಖನಬೆನ್ನು ನೋವಿನ ಸಮಸ್ಯೆಗೆ ಸರ್ವಾಂಗಾಸನ ಬೆಸ್ಟ್