ಬಾರೆ ಭಾಗ್ಯದ ನಿಧಿಯೇ ಕರವೀರ
ನಿವಾಸಿನಿ ಸಿರಿಯೆ ||ಪ||
ಬಾರೆ ಬಾರೆ ಕರವೀರ ನಿವಾಸಿನಿ ಬಾರಿಬಾರಿಗು ಶುಭ
ತೋರು ನಮ್ಮ ಮನಗೆ ||ಅ.ಪ||
ಲೋಕಮಾತೆಯು ನೀನು ನಿನ್ನ ತೋಕನಲ್ಲವೆ ನಾನು
ಆಕಳು ಕರುವಿನ ಸ್ವೀಕರಿಸುವಪರಿ
ನೀ ಕರುಣದಿ ಕಾಲ್ಹಾಕು ನಮ್ಮ ಮನಗೆ ||1||
ನಿಗಮ ವೇದ್ಯಳೆ ನಿನ್ನ ನಾ ಪೊಗಳಲಾಪೆನಲ್ಲ
ಮಗನಪ ರಾಧವ ತೆಗೆದೆಣೆಸದಲೆ ಲಗು
ಬಗೆಯಿಂದಲಿ ಪನ್ನಗವೇಣಿ ||2||
ಕಡೆಗೆ ನಮ್ಮನೆ ವಾಸ ಒಡೆಯ ‘ಅನಂತಾದ್ರೀಶ’
ಒಡೆಯನಿದ್ದಲ್ಲಿಗೆ ಮಡದಿಯು ಬಾಹೊದು
ರೂಢಿಗುಚಿತವಿದು ನಡೆ ನಮ್ಮ ಮನೆಗೆ ||3||