ಮನೆ ದೇವರ ನಾಮ ಬಾರೆ ಭಾಗ್ಯದ ನಿಧಿಯೇ

ಬಾರೆ ಭಾಗ್ಯದ ನಿಧಿಯೇ

0

ಬಾರೆ ಭಾಗ್ಯದ ನಿಧಿಯೇ ಕರವೀರ

ನಿವಾಸಿನಿ ಸಿರಿಯೆ ||ಪ||

ಬಾರೆ ಬಾರೆ ಕರವೀರ ನಿವಾಸಿನಿ ಬಾರಿಬಾರಿಗು ಶುಭ

ತೋರು ನಮ್ಮ ಮನಗೆ ||ಅ.ಪ||

ಲೋಕಮಾತೆಯು ನೀನು ನಿನ್ನ ತೋಕನಲ್ಲವೆ ನಾನು

ಆಕಳು ಕರುವಿನ ಸ್ವೀಕರಿಸುವಪರಿ

ನೀ ಕರುಣದಿ ಕಾಲ್ಹಾಕು ನಮ್ಮ ಮನಗೆ ||1||

ನಿಗಮ ವೇದ್ಯಳೆ ನಿನ್ನ ನಾ ಪೊಗಳಲಾಪೆನಲ್ಲ

ಮಗನಪ ರಾಧವ ತೆಗೆದೆಣೆಸದಲೆ ಲಗು

ಬಗೆಯಿಂದಲಿ ಪನ್ನಗವೇಣಿ ||2||

ಕಡೆಗೆ ನಮ್ಮನೆ ವಾಸ ಒಡೆಯ ‘ಅನಂತಾದ್ರೀಶ’

ಒಡೆಯನಿದ್ದಲ್ಲಿಗೆ ಮಡದಿಯು ಬಾಹೊದು

ರೂಢಿಗುಚಿತವಿದು ನಡೆ ನಮ್ಮ ಮನೆಗೆ ||3||

ಹಿಂದಿನ ಲೇಖನಕೋವಿಡ್ ಉಲ್ಬಣ: ಹೈಬ್ರಿಡ್ ವಿಚಾರಣೆಗೆ ಅವಕಾಶ ನೀಡಲು ಸೂಚಿಸಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಸಿಜೆಐ ಪತ್ರ
ಮುಂದಿನ ಲೇಖನಮತ್ಸ್ಯಾಸನ (ಮೀನಿನ ಭಂಗಿ) ಪ್ರಯೋಜನಗಳು!