ಭಜಕರಿಷ್ಟವೀವಾ ದೇವ ಕಾರ್ತಿಕೇಯನೆ ||ಭಜಕ||
ಒಲುಮೆಗಣ್ಣ ತೆರೆದು ನೋಡು ಹರನ ಕುವರನೇ ||ಒಲುಮೆ||
ಹರನ ಕುವರನೇ…
||ಭಜಕ||
ನವಿಲನೇರಿ ಬರುವೆ ನೀನು ಶರಣು ಷಣ್ಮುಖ
ಅಭಯ ಹಸ್ತ ತೋರಿ ಮೆರೆವ
ಲೋಕ ಪಾಲಕ ||ನವಿಲನೇರಿ||
ಕಷ್ಟನಷ್ಟ ನೋವು ದುಃಖವಿತ್ತು ನಮ್ಮನೂ ||2||
ಪೊರೆದು ನೋಡಿ ಸತ್ವವಿರಲು
ಪೊರೆವಾ ಕರುಣನೂ ||ಭಜಕ||
ಸುಖದಿ ನಿನ್ನನು ಮರೆತೆ ಸ್ವಾಮಿ ನೀನು ಮರೆವೆಯ
ನಿನ್ನ ಕೃಪಾವರುಷದಿಂದ ಎನ್ನಾ ಪೊರೆವೆಯಾ
||ಸುಖದಿ||
ಬೆಂಕಿಯಲ್ಲಿ ಬೆಂದ ಚಿನ್ನ ನಿಜದ ವರ್ಣದಿ||2||
ಹೊಳೆಯುವಂತೆ ಹೊಳೆಯಿಸೆನ್ನ ನಿತ್ಯಾ ದುಃಖದೀ ||ಭಜಕ||