ಮನೆ ದೇವರ ನಾಮ ಭಜಕರಿಷ್ಟವೀವಾ ದೇವ

ಭಜಕರಿಷ್ಟವೀವಾ ದೇವ

0

ಭಜಕರಿಷ್ಟವೀವಾ ದೇವ ಕಾರ್ತಿಕೇಯನೆ ||ಭಜಕ||

ಒಲುಮೆಗಣ್ಣ ತೆರೆದು ನೋಡು ಹರನ ಕುವರನೇ ||ಒಲುಮೆ||

ಹರನ ಕುವರನೇ…

||ಭಜಕ||

ನವಿಲನೇರಿ ಬರುವೆ ನೀನು ಶರಣು ಷಣ್ಮುಖ

ಅಭಯ ಹಸ್ತ ತೋರಿ ಮೆರೆವ

ಲೋಕ ಪಾಲಕ ||ನವಿಲನೇರಿ||

ಕಷ್ಟನಷ್ಟ ನೋವು ದುಃಖವಿತ್ತು ನಮ್ಮನೂ ||2||

ಪೊರೆದು ನೋಡಿ ಸತ್ವವಿರಲು

ಪೊರೆವಾ ಕರುಣನೂ ||ಭಜಕ||

ಸುಖದಿ ನಿನ್ನನು ಮರೆತೆ ಸ್ವಾಮಿ ನೀನು ಮರೆವೆಯ

ನಿನ್ನ ಕೃಪಾವರುಷದಿಂದ ಎನ್ನಾ ಪೊರೆವೆಯಾ

||ಸುಖದಿ||

ಬೆಂಕಿಯಲ್ಲಿ ಬೆಂದ ಚಿನ್ನ ನಿಜದ ವರ್ಣದಿ||2||

ಹೊಳೆಯುವಂತೆ ಹೊಳೆಯಿಸೆನ್ನ ನಿತ್ಯಾ ದುಃಖದೀ ||ಭಜಕ||

ಹಿಂದಿನ ಲೇಖನರೈಲಲ್ಲಿ ಸಂಚರಿಸುವಾಗ ಕಳವಾದರೆ ಅದು ಸೇವಾ ನ್ಯೂನತೆಯಲ್ಲ; ಪ್ರಯಾಣಿಕರು ತಮ್ಮ ವಸ್ತುಗಳ ರಕ್ಷಿಸಿಕೊಳ್ಳಬೇಕು: ಸುಪ್ರೀಂ
ಮುಂದಿನ ಲೇಖನತಾಡಾಸನ