ಮನೆ ದೇವರ ನಾಮ ಮನುಜ ಶರೀರವಿದೇನು ಸುಖ

ಮನುಜ ಶರೀರವಿದೇನು ಸುಖ

0

ಮನುಜ ಶರೀರವಿದೇನು ಸುಖ ಇದ

ನೆನೆದರೆ ಘೋರವಿದೇನು ಸುಖ ||

ಜನನ ಮರಣ ಮಲದ ಕೂಪದಲ್ಲಿದ್ದು

ಅನುಭವಿಸುವುದು ಇದೇನು ಸುಖ

ತನುವಿದ್ದಾಗಲೆ ಹೃದಯದ ಶೌಚದ

ಸ್ತನಗಳನುಂಬುವುದೇನು ಸುಖ ||

ದಿನ ದಿನ ಹಸಿವು ತೃಷೆ ಘನ ಘನ ರೋಗದೊ-

ಳನುಭವಿಸುವುದೇನು ಸುಖ

ನೆನೆಯಲನಿತ್ಯ ನೀರ್ಗುಳ್ಳೆಯಂತಿರುತಿಪ್ಪ

ತನು ಮಲ ಭಾಂಡವಿದೇನು ಸುಖ ||

ಪರಿ ಪರಿ ವಿಧದಲಿ ಪಾಪವ ಗಳಿಸುತ

ನರಕಕೆ ಬೀಳುವದೇನು ಸುಖ

ಪುರಂದರವಿಠಲನ ಮನದಿ ನೆನೆದು ಸ-

ದ್ಧರ್ಮದಿ ನಡೆದರೆ ಆಗ ಸುಖ ||