ಮನೆ ಅಪರಾಧ ಕಂಟೈನರ್‌ ಗೆ ಕಾರು ಢಿಕ್ಕಿ: ಇಬ್ಬರ ಸಾವು, ಚಾಲಕನ ಸ್ಥಿತಿ ಗಂಭೀರ

ಕಂಟೈನರ್‌ ಗೆ ಕಾರು ಢಿಕ್ಕಿ: ಇಬ್ಬರ ಸಾವು, ಚಾಲಕನ ಸ್ಥಿತಿ ಗಂಭೀರ

0

ಕುಷ್ಟಗಿ: ಕಂಟೈನರ್ ಗೆ ಸ್ವಿಫ್ಟ್ ಕಾರು ಢಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಚಾಲಕನ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಇಲ್ಲಿನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.

Join Our Whatsapp Group

ವಿಜಯಪುರದ ಸ್ವಿಫ್ಟ್ ಕಾರು ಅತಿ ವೇಗದಲ್ಲಿ ಚಾಲಕನ ನಿರ್ಲಕ್ಷ್ಯತನದ ಚಾಲನೆಯಿಂದ ಕಂಟೈನರ್ ಹಿಂಭಾಗಕ್ಜೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ ಕಾರು ಕಂಟೈನರ್ ಒಳಗೆ ನುಗ್ಗಿದೆ. ಕಂಟೈನರ್ ಹಿಂಭಾಗದಲ್ಲಿ ಸಿಲುಕಿದ್ದ ಕಾರನ್ನು ಬಿಡಿಸಿಕೊಳ್ಳಲು ಸುಮಾರು ದೂರ ಎಳೆದೊಯ್ದಿದ್ದು ಘಟನೆ ಭೀಕರವಾಗಿದೆ.

ಘಟನೆ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿ ಮೃತರಾಗಿದ್ದು, ಚಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಮೃತರು ಯಾರೆಂದು ಗುರುತು ತಿಳಿದು ಬಂದಿಲ್ಲ. ಸ್ಥಳಕ್ಕೆ ಪಿಎಸೈ ಮೌನೇಶ್ ರಾಠೋಡ್ ಭೇಟಿ ನೀಡಿದ್ದಾರೆ.

ಹಿಂದಿನ ಲೇಖನಖ್ಯಾತ ಖಳನಟ ಕಝಾನ್​ ಖಾನ್​ ಹೃದಯಾಘಾತದಿಂದ ನಿಧನ
ಮುಂದಿನ ಲೇಖನಪ್ಲಾಸ್ಟಿಕ್ ಬಿಡಿ…ಬಟ್ಟೆ ಬ್ಯಾಗ್ ಹಿಡಿ: ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ನಿಷೇಧ ಜಾಗೃತಿ