ಮನೆ ದೇವರ ನಾಮ ಕೂಸು ಕಂಡೆವಮ್ಮಅಮ್ಮ ನಿಮ್ಮಕೂಸು

ಕೂಸು ಕಂಡೆವಮ್ಮಅಮ್ಮ ನಿಮ್ಮಕೂಸು

0

ಕೂಸು ಕಂಡೆವಮ್ಮಅಮ್ಮ

ನಿಮ್ಮ ಕೂಸು ಕಂಡೆವಮ್ಮ ||ಕೂಸು||

ಕಾಸಿಗೆ ವೀಸದ ಬಡ್ಡಿ ಗಳಿಸಿಕೊಂಡು

ಶೇಷಗಿರಿಯ ಮೇಲೆ ವಾಸವಾಗಿದ್ದಾನೆ||ಕೂಸು||

ವಂಚಿಸಿ ಬಲೆಯೊಳ್ ಪ್ರಪಂಚವೆಲ್ಲ ಸೆಳೆದು

ಕಂಚಿ ಪಟ್ಟಣದಲಿ ಬಲು ಮಿಂಚಾಗಿದ್ದಾನೆ ||ವಂಚಿಸಿ||

ಗುಡ್ಡ ಬೆರಳಲಿ ಎತ್ತಿ ದೊಡ್ಡಿ ಗೋವ್ಗಳ ಕಾಯ್ದ

ಒಡ್ಡಿ ಜಗನ್ನಾಥ ಗಿಡ್ಡಾಗಿದ್ದಾನೆ ||ಕೂಸು||

ದುಡುಕು ಮಾಡಿ ಹಾಲು ಮಡಕೆಗಳನ್ನೊಡೆದು

ಹಡಗನೇರಿ ಬಂದು ಉಡುಪಿಲಿ ಇದ್ದಾನೆ ||ದುಡುಕು||

ಮಂಗಳರೇಖೆ ಪಾದಂಗಳುಳ್ಳ ನಿಮ್ಮ

ರಂಗ ಪುರಂದರವಿಠಲ ಶ್ರೀ ಕೃಷ್ಣ

ರಂಗ ಪುರಂದರವಿಠ್ಠಲ ಶ್ರೀ ಕೃಷ್ಣಾ…||ಕೂಸು||