ಮನೆ ಅಪರಾಧ 25 ಲಕ್ಷ ರೂ. ಶುಲ್ಕ ಪಡೆದು ಉಪನ್ಯಾಸಕಿ ನಾಪತ್ತೆ: ಪ್ರವೇಶ ಪತ್ರ ಸಿಗದೆ‌ ವಿದ್ಯಾರ್ಥಿಗಳು ಅತಂತ್ರ

25 ಲಕ್ಷ ರೂ. ಶುಲ್ಕ ಪಡೆದು ಉಪನ್ಯಾಸಕಿ ನಾಪತ್ತೆ: ಪ್ರವೇಶ ಪತ್ರ ಸಿಗದೆ‌ ವಿದ್ಯಾರ್ಥಿಗಳು ಅತಂತ್ರ

0

ಮೈಸೂರು: ವಿದ್ಯಾರ್ಥಿಗಳಿಂದ ಶುಲ್ಕ ಪಡೆದು ಉಪನ್ಯಾಸಕಿ ನಾಪತ್ತೆಯಾಗಿದ್ದಾರೆಂಬ ಆರೋಪ ಕೇಳಿಬಂದಿದ್ದು, ಹಣವೂ ಇಲ್ಲದೇ, ನಾಳಿನ ಪರೀಕ್ಷೆಗೆ ಪ್ರವೇಶ ಪತ್ರವು ಸಿಗದೆ‌ ವಿದ್ಯಾರ್ಥಿಗಳು ಅತಂತ್ರರಾಗಿರುವಂತಹ ಘಟನೆ ನಗರದ ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ.

Join Our Whatsapp Group

ಉಪನ್ಯಾಸಕಿ ಹರ್ಷಿತಾ ವಿರುದ್ಧ ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.

ಜು. 6ರಂದೇ ಉಪನ್ಯಾಸಕಿ ವಿರುದ್ಧ ಎಫ್‌ ಐಆರ್ ದಾಖಲಾಗಿದ್ದು, ಐಪಿಸಿ ಸೆಕ್ಷನ್ 468, 470, 420ರ ಅಡಿ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಗೂಗಲ್ ​ಪೇ ಹಾಗೂ ಫೋನ್ ​ಪೇ ಮೂಲಕ 200 ವಿದ್ಯಾರ್ಥಿಗಳಿಂದ 25 ಲಕ್ಷ ರೂ. ಶುಲ್ಕ ಪಡೆದಿದ್ದು, ವಿದ್ಯಾರ್ಥಿಗಳ ಹಣ ದುರುಪಯೋಗ ಪಡಿಸಿಕೊಂಡಿರುವುದಾಗಿ ಆರೋಪಿಸಲಾಗಿದೆ. ಫೀಸ್​ ಸಂದಾಯವಾಗದ ಹಿನ್ನೆಲೆ ಕಾಲೇಜಿನಲ್ಲಿ ಪ್ರವೇಶಪತ್ರ ನೀಡಲು ನಿರಾಕರಿಸುತ್ತಿದ್ದಾರೆ. ಸದ್ಯ ನಾಪತ್ತೆಯಾಗಿರುವ ಉಪನ್ಯಾಸಕಿ ಹರ್ಷಿತಾಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಹಿಂದಿನ ಲೇಖನರಾಜಧಾನಿಯ ಸುತ್ತಲಿನ ನಗರಗಳಿಗೆ ಸೌಲಭ್ಯ ಒದಗಿಸುವ ಇಚ್ಛೆ: ಎಂ ಬಿ ಪಾಟೀಲ
ಮುಂದಿನ ಲೇಖನಕೂಸು ಕಂಡೆವಮ್ಮಅಮ್ಮ ನಿಮ್ಮಕೂಸು