ದಯ ತೋರೋ ಕರುಣಾಕರಾ |
ಶಂಕರ ವರ ಗಂಗಾಧರ ಪಾರ್ವತಿ ಪ್ರಿಯಕರ ||
ನಾಟ್ಯವಾಡುವ ನಟರಾಜ ನೀನು |
ಜಡೆಯಲಿ ಗಂಗೆ ಮುಡಿದವನು |
ತ್ರಿಶೂಲಧರಾ ಶಿವಶಂಕರ|
ಚಂದ್ರಶೇಖರ ಗಜ ಚರ್ಮಾಂಬರ ||
ನಂದಿವಾಹನ ಮುಕ್ಕಣ್ಣ ನೀನು|
ಭೃಂಗಿ ಶೃಂಗಿ ಗಣಗಳೊಡೆಯ |
ಸಕಲ ಜನರು ನಿನಗೆ ಶರಣ ||
ಭಕುತರ ಭಹುತಿಗೆ ಬೇಗನೇ ಒಲಿಯುವೆ |
ಬೇಡಿದ್ದನ್ನ ನೀನು ಕರುಣಿಸುವೆ |
ನಾನು ಬೇಡುವೆ ನಿನ್ನಯ ಚರಣ |
ಜಹಾನ್ವಿ ವಿಠಲನ ಇರಲಿ ಸ್ಮರಣ ||