ಮಂಡ್ಯ: ತಾಲ್ಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ಬರುವ ಮೈಷುಗರ್ ಆಸ್ತಿಯಾದ 3.33 ಎಕರೆಗೂ ಹೆಚ್ಚು ಜಮೀನು ಇದ್ದು, ಇಲ್ಲಿ ಸಾರ್ವಜನಿಕ ಕೆಲಸಗಳಿಗೆ ಬಳಕೆಯಾಗಿರುವುದು ಕಂಡು ಬಂದಿದೆ ಇನ್ನುಳಿದಂತೆ ಸಮಸ್ಯೆಯಿದ್ದರೆ ಚರ್ಚೆ ನಡೆಸಿ ಬಗೆಹರಿಸಿಕೊಡುತ್ತೇನೆಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಭರವಸೆ ನೀಡಿದರು.
ಹಲ್ಲೇಗೆರೆ ಗ್ರಾಮಕ್ಕೆ ಭೇಟಿ ನೀಡಿ ಅವರು ಮಾತನಾಡಿ, ಈ ಸ್ಥಳವನ್ನು ಈಗಾಗಲೇ ಆಸ್ಪತ್ರೆ, ಶಾಲೆ, ಅಂಗನವಾಡಿ, ದೇವಾಲಯ ಹಾಗೂ ವಾಟರ್ ಟ್ಯಾಂಕ್, ಸಂತೇ ಮೈದಾನಕ್ಕೆ ಬಳಸಿಕೊಂಡಿದ್ದಾರೆ. ನಮ್ಮ ವ್ಯಾಪ್ತಿಯಲ್ಲಿ ಅಂದರೆ ಮೈಷುಗರ್ ಕಾರ್ಖನೆಯಲ್ಲಿ ಸಂಬಂಧಪಟ್ಟವರ ಗಮನಕ್ಕೆ ತಂದು ನಿಮಗೆ ಒಳಿತು ಮಾಡಿಕೊಡುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಖಾನೆ ಅಧಿಕಾರಿ ಸ್ವಾಮಿಗೌಡ, ಪರ್ಸನಲ್ ಆಫೀಸರ್ ವಿನಾಯಕ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಚಿಕ್ಕಬಳ್ಳಿ ಕೃಷ್ಣಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ ಜಯರಾಮಗೌಡ, ಉಪಾಧ್ಯಕ್ಷೆ ಭಾಗ್ಯಮ್ಮ ಪಾಪಯ್ಯ ಹಾಗೂ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.