ನಿಂತೆ ನೀ ಅವನ ಮನದಲ್ಲಿ ಅಂದು |
ಹನುಮನೆಂಬ ಭಕ್ತ ನಿನ್ನಯ ಬಂಧು |
ನಿಂತೆ ನೀ ಅವನ ಮನದಲ್ಲಿ ಅಂದೂ…..|| ಪ
ನಿನ್ನ ದಾಸ್ಯವ ಬಯಸಿ ಬಂದನು ಹನುಮಾ,
ನಿನ್ನ ಸೇವಕ ನಾನೆಂದು ಭೀಮ ,
ತೋರಿದ ನಿನ್ನನು ಹೃದಯದಿ ಹನುಮ,
ಸಾರಿದನವನು ನಿನ್ನಯ ಪ್ರೇಮ, ನಿಂತೆ ನೀ ಅವನ ಮನದಲ್ಲಿ ಅಂದು…..|| 1
ಸ್ತುತಿಸುತ ನಿನ್ನನು ಕೊಂಡಾಡಿದ ಹನುಮ,
ಮತಿವಂತ ಸಾಗರದ ಜಿಗಿದ ನಿನಗಾಗಿ ಹನುಮ,
ಗರುಡನಂತೆ ಹೆಗಲಲಿ ಹೊತ್ತು ನಿನ್ನನು….
ದುರುಳ ರಾವಣನ ಲಂಕೆಯ ಸುಟ್ಟನವನು,
ನಿಂತೆ ನೀ ಅವನ ಮನದಲ್ಲಿ ಅಂದೂ…..|| 2
ವಾನರ ವೀರ ನಿನ್ನ ಹೃದಯದ ಚೋರ,
ದಾನವರ ದಶ ದಿಕ್ಕುಗಳ ಆಳಿಸಿದ ಶೂರ,
ನಿನ್ನಯ ನಾಮದೊಡನೆ ಹನುಮನ ಧ್ಯಾನ,
ಜಹ್ನವಿ ವಿಠಲನ ನಿನ್ನ ನಿರುತದಿ ಇರಲಿ ಸ್ಮರಣ,
ನಿಂತೆ ನೀ ಅವನ ಮನದಲ್ಲಿ ಅಂದೂ….|| 3