ಮನೆ ದೇವರ ನಾಮ ಆಂಜನೇಯ

ಆಂಜನೇಯ

0

ನಿಂತೆ ನೀ ಅವನ ಮನದಲ್ಲಿ ಅಂದು |

ಹನುಮನೆಂಬ ಭಕ್ತ ನಿನ್ನಯ ಬಂಧು |

ನಿಂತೆ ನೀ ಅವನ ಮನದಲ್ಲಿ ಅಂದೂ…..|| ಪ

ನಿನ್ನ ದಾಸ್ಯವ ಬಯಸಿ ಬಂದನು ಹನುಮಾ, 

ನಿನ್ನ ಸೇವಕ ನಾನೆಂದು ಭೀಮ ,

ತೋರಿದ ನಿನ್ನನು ಹೃದಯದಿ ಹನುಮ,

ಸಾರಿದನವನು ನಿನ್ನಯ ಪ್ರೇಮ, ನಿಂತೆ ನೀ ಅವನ ಮನದಲ್ಲಿ ಅಂದು…..|| 1

ಸ್ತುತಿಸುತ ನಿನ್ನನು ಕೊಂಡಾಡಿದ ಹನುಮ,

ಮತಿವಂತ ಸಾಗರದ ಜಿಗಿದ ನಿನಗಾಗಿ ಹನುಮ,

ಗರುಡನಂತೆ ಹೆಗಲಲಿ ಹೊತ್ತು ನಿನ್ನನು….

ದುರುಳ ರಾವಣನ ಲಂಕೆಯ ಸುಟ್ಟನವನು,

ನಿಂತೆ ನೀ ಅವನ ಮನದಲ್ಲಿ ಅಂದೂ…..|| 2

ವಾನರ ವೀರ ನಿನ್ನ ಹೃದಯದ ಚೋರ,

ದಾನವರ ದಶ ದಿಕ್ಕುಗಳ ಆಳಿಸಿದ ಶೂರ,

ನಿನ್ನಯ ನಾಮದೊಡನೆ ಹನುಮನ ಧ್ಯಾನ,

ಜಹ್ನವಿ ವಿಠಲನ ನಿನ್ನ ನಿರುತದಿ ಇರಲಿ ಸ್ಮರಣ,

ನಿಂತೆ ನೀ ಅವನ ಮನದಲ್ಲಿ ಅಂದೂ….|| 3

ಹಿಂದಿನ ಲೇಖನಸಿ ಎಂ ಸಿದ್ದರಾಮಯ್ಯ ಗೆ ಹೈಕೋರ್ಟ್  ರಿಲೀಫ್
ಮುಂದಿನ ಲೇಖನಮಂಜಿಷ್ಟ