ಚಿಂತೆ ಏಕೆ ಮನವೇ, ಚಿಂತೆ ಏಕೆ ಮನವೇ ಗುರು ರಾಘವೇಂದ್ರನಿರಲು ||
ಚಿಂತೆ ಕಳೆದು ನಿಶ್ಚಿಂತೆಯಿಂದ ||
ಇರುವಂತೆ ಮಾಡುವ ಚಿಂತಾಮಣಿ ಇರೇ || ಚಿಂತೆ ಏಕೆ ||
ಬೀತಿ ಏಕೆ ಮನವೇ ಗುರುರಾಯರ ಬಳಿಯಲ್ಲಿ ಇರಲು ||
ಭೀತಿ ಕಳೆದು ನಿರ್ಭೀತಿ ಇಂದ ||
ಇರುವಂತೆ ಮಾಡುವ ಗುರುರಾಯನಿರಲು || ಚಿಂತೆ ಏಕೆ ||
ದುಃಖವೇತಕೆ ಮನವೆ ಅ ಅ ಅ ಅ |
ದುಃಖವೇತಕೆ ಮನವೆ ಸದ್ಗುರು ನಾಮ ನಿನ್ನಲ್ಲಿರಲು ||
ದುಃಖ ಕಳೆದು ಸುಖ ನೀಡಲೆಂದೆ ||
ಗುರು ಸಾರ್ವಭೌಮನು ಇರುವಾಗ ನಿನಗೆ || ಚಿಂತೆ ಏಕೆ ||
ಮುಳುಗ ಬೇಡ ಮನವೆ, ಆಸೆಯ ಕಡಲಲ್ಲಿ ನೀನೂ ||
ತಾವರೆ ಎಲೆಯು ಜಲರಾಶಿ ಎಲ್ಲಿ||
ಇರುವಂತೆ ನೀನಿರೆ ಗುರುರಾಯ ಮೆಚ್ಚುವ || ಚಿಂತೆ ಏಕೆ ||