ಮನೆ ಮನೆ ಮದ್ದು ಕಣ್ಣಿನ ಸಮಸ್ಯೆಗೆ ಪರಿಹಾರ

ಕಣ್ಣಿನ ಸಮಸ್ಯೆಗೆ ಪರಿಹಾರ

0

ಕಣ್ಣುರಿ ನಿವಾರಣೆಗೆ :

•       ಪ್ರತಿದಿನ ಪ್ರಾತಃಕಾಲ ಬರಿ ಹೊಟ್ಟೆಯಲ್ಲಿ 8 ರಿಂದ 10 ಬಿಳಿ ದಾಸವಾಳದ ಹೂಗಳನ್ನು ತಿನ್ನುವ ಅಭ್ಯಾಸವಿಟ್ಟುಕೊಂಡರೆ ಕಣ್ಣು ಉರಿ ನಿವಾರಣೆಯಾಗುವುದು.

•       (ವಿಶೇಷ ಸೂಚನೆ: ಬಿಳಿ ದಾಸವಾಳದ ಹೂವು ತಿನ್ನುವುದರಿಂದ ಹೊಟ್ಟೆ ನೋವು ಸಹ ಕಾಣಿಸಿಕೊಳ್ಳುವುದಿಲ್ಲ.)

•       ತೆಳುವಾಗಿ ದುಂಡಗೆ ಕತ್ತರಿಸಿದ ಸೌತೇಕಾಯಿ ಬಿಲ್ಲೆಗಳನ್ನು ಮುಚ್ಚಿದ ಕಣ್ಣು ರೆಪ್ಪೆಗಳ ಮೇಲೆ ಇರಿಸಿ 10-15 ನಿಮಿಷಗಳ ಕಾಲ ಮಲಗಿ ವಿಶ್ರಾಂತಿ ಪಡೆಯಿರಿ. ಈ ಚಿಕಿತ್ಸೆಯಿಂದ ಕಣ್ಣುರಿ ನಿವಾರಣೆಯಾಗುವುದು ಮತ್ತು ಕಣ್ಣು ಕೆಂಪಾಗಿದ್ದಲ್ಲಿ ದೋಷ ನಿವಾರಣೆಯಾಗುವುದು.

ಕಣ್ಣು ಚುಚ್ಚುವಿಕೆ ನಿವಾರಣೆಗೆ:

•       ದಿನಕ್ಕೆರಡು ಬಾರಿ ಐದಾರು ತೊಟ್ಟು ಎದೆಹಾಲನು ಪ್ರತಿಯೊಂದು ಕಣ್ಣಿಗೂ ಬಿಡುತ್ತಿದ್ದರೆ ಗುಣ ಕಂಡು ಬರುವುದು.

•       ಹರಳು ಬೀಜದ ಹೊರ ಸಿಪ್ಪೆ ತೆಗೆಯಿರಿ, ತಿರುಳನ್ನು ಎದೆ ಹಾಲಿನಲ್ಲಿ ಚೆನ್ನಾಗಿ ಮೆಸೇಜ್ ಮೂರು ದಿನಗಳ ಕಾಲ ಕಣ್ಣುಗಳಿಗೆ ಹಚ್ಚಿದಲ್ಲಿ ಕಣ್ಣುರಿ ಮತ್ತು ಕಣ್ಣು ಚುಚ್ಚುವಿಕೆ ನಿವಾರಣೆಯಾಗುವುದು.

•       ಒಂದು ಟೀ ಚಮಚ ಅಪ್ಪಟ ಹರಳೆ ಎಣ್ಣೆಯನ್ನು ಅಷ್ಟೇ ಪ್ರಮಾಣ ಎದೆ ಹಾಲಿನಲ್ಲಿ ಚೆನ್ನಾಗಿ, ರಂಗೋಲಿಸಿ ಕಣ್ಣುಗಳಿಗೆ ಬಿಡಿ ಕಣ್ಣು ಚುಚ್ಚುವಿಕೆ ನೋವು ಸಹಿತವಾದ ಕಣ್ಣುರಿ, ಕಣ್ಣು ಕೆಂಪಾಗುವಿಕೆ ಇವೆ ಮೊದಲಾದ ಕಣ್ಣಿನ ದೋಷಗಳು ಈ ಚಿಕಿತ್ಸೆಯಿಂದ ಗುಣವಾಗುವು.

•       ವಿಶೇಷ ಸೂಚನೆ: ಕಣ್ಣಿನಲ್ಲಿ ಸೇರಿರಬಹುದಾದ ಅನ್ಯ ಪದಾರ್ಥವನ್ನು ಹೊರಕ್ಕೆ ಹೊರಡಿಸುವ ಸಲುವಾಗಿಯೂ ಈ ಚಿಕಿತ್ಸೆ ಮಾಡಬಹುದು.

ಕಣ್ಣು ಕೆಂಪಗಾಗುವಿಕೆ ನಿವಾರಣೆಗೆ:

•       ಗರಿಕೆ ಹುಲ್ಲಿನ ಸ್ವಚ್ಛವಾದ ರಸವನ್ನು ತೊಟ್ಟು ತೊಟ್ಟಾಗಿ ಕಣ್ಣಿಗೆ ಬಿಡುತ್ತಿದ್ದರೆ ಗುಣ ಕಂಡುಬರುವುದು

•       ಉತ್ತಮ ತರಹೆಯ ಹಾಗೂ ಧೂಳಿಲ್ಲದ ಕೊಬ್ಬರಿ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ ಮರುದಿನ ಬೆಳಿಗ್ಗೆ ತಿಳಿಬಸಿಯಿರಿ ಆ ತಿಳಿಯಿಂದ ಕಣ್ಣುಗಳನ್ನು ತೊಳೆಯಿರಿ ಮತ್ತು ಕಣ್ಣು ಕೆಂಪಾಗುವಿಕೆ ಹೋಗಲಾಡಿಸಲು ಇದು ಉತ್ತಮ ಚಿಕಿತ್ಸೆ.

ರಾತ್ರಿಯ ವೇಳೆ ನಿದ್ದೆ ಹತ್ತದಿರುವಾಗ:

•       ಚೆನ್ನಾಗಿ ಪಕ್ವವಾದ ಸಿಹಿ ರುಚಿಯುಳ್ಳ ಮಾವಿನ ಹಣ್ಣು ತಿಂದು ಒಂದು ಬಟ್ಟಲು ಹಾಲು ಕುಡಿಯಿರಿ ಪರಿಸ್ಥಿತಿ ಸುಧಾರಿಸುವ ಅವರಿಗೂ ದಿನಕ್ಕೊಮ್ಮೆ ಈ ಪತ್ಯ ಆಹಾರ ಸೇವಿಸುತ್ತಿರಿ.

•       ಅರ್ಧ ಬಟ್ಟಲು ಗಸಗಸೆ ಹಾಲಿನೊಂದಿಗೆ ಅಷ್ಟೇ ಪ್ರಮಾಣ ತೆಂಗಿನ ಹಾಲು ಬೆರೆಸಿ ಇದನ್ನು ಒಂದು ಊಟದ ಚಮಚ ಜೇನು ತುಪ್ಪ  ದೊಂದಿಗೆ ಸೇವಿಸಿ ರಾತ್ರಿ ಮಲಗುವುದಕ್ಕಿಂತ ಮುಂಚೆ ಈ ಹಾಲು ಸೇವಿಸುವುದು ಉತ್ತಮ ಪರಿಸ್ಥಿತಿ ಸುಧಾರಿಸುವವರೆಗೂ ಈ ಕ್ರಮ ಮುಂದುವರಿಸಿ.

ರಾತ್ರಿ ವೇಳೆ ಕಣ್ಣು ಕಾಣಿಸದಿರುವುದು:

•       ದಂಟು ಸೊಪ್ಪು ಬಸಳೆ ಸೊಪ್ಪು ದ್ವಿದಳ ಧಾನ್ಯಗಳ ಸೊಪ್ಪು ಎಲೆಕೋಸು, ಕೊತ್ತಂಬರಿ ಸೊಪ್ಪು ನುಗ್ಗೆಕಾಯಿ ಕ್ಯಾರೆಟ್ ಪರಂಗಿ ಹಣ್ಣು ಮಾವಿನಹಣ್ಣು ಟೊಮ್ಯಾಟೋ ಇವುಗಳನ್ನು ನಿತ್ಯ ಆಹಾರದಲ್ಲಿ ಬಳಸುವ ವಾಡಿಕೆ ಇಟ್ಟುಕೊಂಡರೆ ದೋಷ ತಲೆದೋರುವುದಿಲ್ಲ. ಇದೊಂದು ಮುನ್ನೆಚ್ಚರಿಕೆಯ ಕ್ರಮ.

ಕಣ್ಣು ಮಂಜಾದಾಗ:

•       ಬೇವಿನ ಹಸಿರೆಲೆಗಳನ್ನು ಶುಭ್ರವಾಗಿ ತೊಳೆದು ಕಲ್ಲು ಬಂಡೆಯ ಮೇಲೆ ಹಾಕಿ ಒನಕೆಯಿಂದ ಕುಟ್ಟಿ ಹೀಗೆ ತಯಾರಿಸಿದ ತೊಕ್ಕನ್ನು ನೀರಿನಲ್ಲಿ ಕದಡಿ ಬಟ್ಟೆಯಿಂದ ಶೋಧಿಸಿ ರಸವನ್ನು ಗಾಜಿನ ಬಾಟಲಿನಲ್ಲಿ ತುಂಬಿಟ್ಟು ಹಾಗಾಗಿ ಕಣ್ಣಿಗೆ ಬಿಡುತ್ತೀರಿ ಈ ಚಿಕಿತ್ಸೆಯಿಂದ ಗುಣ ಕಂಡು ಬರುವುದು.

•       ಉತ್ತಮವಾದ ಆಲೂಗೆಡ್ಡೆಯನ್ನು ಆರಿಸಿ ತೆಗೆದು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ ನಂತರ ಗೆಡ್ಡೆಯನ್ನು ನೀರು ಸಹಿತ ಗಂಧದ ಕಲ್ಲಿನ ಮೇಲೆ ತೇದು ಗಂಧ ತೆಗೆಯಿರಿ ಈ ಗಂಧವನ್ನು ಕಣ್ಣಿನ ರೆಪ್ಪೆಗಳಿಗೆ ಹಚ್ಚಿ ಹಲವು ದಿನಗಳವರೆಗೆ ಈ ಚಿಕಿತ್ಸೆ ಮುಂದುವರಿಸಿ.

•       ಎರಡು ಊಟದ ಚಮಚ ಸೋಂಪು ಕಾಳನ್ನು ಅಷ್ಟೇ ಪ್ರಮಾಣ ಕಲ್ಲು ಸಕ್ಕರೆ ಪುಡಿಯೊಂದಿಗೆ ಬೆರೆಸಿ ನುಣ್ಣಗೆ ಚೂರ್ಣಿಸಿ, ಏಳೆಂಟು ಬಾದಾಮಿ ಬೀಜಗಳನ್ನು ನೀರಿನಲ್ಲಿ ನೆನೆಹಾಕಿ ನುಣ್ಣಗೆ ಅರೆಯಿರಿ. ಇವಿಷ್ಟನ್ನು ಒಂದು ಬಟ್ಟಲು ಕಾದ ಹಾಲಿಗೆ ಹಾಕಿ ಚೆನ್ನಾಗಿ ಕದಡಿ ಹೀಗೆ ಸಿದ್ಧಪಡಿಸಿದ ಹಾಲನ್ನು ಪ್ರತಿದಿನ ರಾತ್ರಿ ಮಲಗುವುದಕ್ಕಿಂತ ಮುಂಚೆ ಸೇವಿಸಿ ಆಜೀವಪರ್ಯಂತ ಈ ಪದ್ಧತಿ ಅನುಸರಿಸುವುದು ಉತ್ತಮವೇ ಸರಿ.

ಹಿಂದಿನ ಲೇಖನಚಿಂತೆ ಏಕೆ ಮನವೆ
ಮುಂದಿನ ಲೇಖನಲಘು ಅಥವಾ ಸಂಕ್ಷಿಪ್ತ ವ್ಯಾಯಾಮಗಳು: ಭಾಗ-2