ಹೇಳುವೆ ಕಥೆ ಹೇಳುವೆ ಕೇಳಿರಿ ಕಥೆ ಹೇಳುವೆ ||
ಗೌರಿ ಪುತ್ರ ವಿನಾಯಕನಿಗೆ, ಆನೆ ಮುಖದ ಬಂದ ಕಥೆಯ || ಹೇಳುವೆ ||
ಒಂದು ದಿನ ಪಾರ್ವತಿಯು ಸ್ಥಾನಗೃಹಕೆ ಹೊರಟಳು,
ಮಣ್ಣಿನಿಂದ ಮೂರ್ತಿಯ ಮಾಡಿ ಜೀವ ಅದಕ್ಕೆ ಇಟ್ಟಳು ||
ಅಮ್ಮ ನಿನ್ನ ಆಜ್ಙೆಯೇನು ಎಂದು ಕೇಳಿ ಕಂದನು ||
ಕಾವಲಿರು ಎಂದಳು ಗೌರಿ ಒಲವಿನಿಂದ|| ||ಹೇಳುವೆ||
ಕಂದ ಕಾವಲಿರುವ ವೇಳೆ ಶಿವನು ಅಲ್ಲಿಗೆ ಬಂದ|
ಶಿವನು ಯಾರೆಂದರಿಯದೆ ನಿಲ್ಲಿಸಿದನು ಕಂದಾ |
ಒಳಗೆ ಬಿಡೆನು ಇಲ್ಲೆ ನಿಲ್ಲಿ ಎಂದು ಕಂದ ಎನಲು |
ಅರಗೆ ಉಕ್ಕಿಬಂತು ಆಗ ಕೋಪದ ಹೊನಲು | ಕೋಪದ ಹೊನಲು |
ಕೋಪದಿಂದ ಶೂಲತೆಗೆದು ನಿಂತನು ತ್ರಿಪುರಾರಿ|
ಕಂದನ ತಲೆ ಕತ್ತರಿಸಿದ ಕಾಮ ಸಂಹಾರಿ |
ಶಬ್ದ ಕೇಳಿ ಹೊಳಗಿನಿಂದ ಓಡಿ ಬಂದಳು ಗೌರಿ |
ಸತ್ತ ಮಗನ ಕಂಡು ಅತ್ತು ಗೋಳಾಡಿದಳು ನಾರಿ ||
ಸತ್ತ ಹುಡುಗ ತನ್ನ ಮಗನು ಎಂದು ಅರಿತ ನೊಂದ ಶಿವನು,
ಒಂದು ತಲೆಯ ಅರಿಸಿ ತನ್ನಿ ಎಂದು ಅಜ್ಙೆ ತಂದನು ||
ಅರಸಿ ಹೊರಟರು ಗಣಗಳು ದಿಕ್ಕು ದಿಕ್ಕಿಗೆ |
ಆನೆ ಒಂದು ಮಲಗಿತ್ತು ಉತ್ತರ ದಿಕ್ಕಿಗೆ |
ಆನೆ ತಲೆ ಕತ್ತರಿಸಿ ಶಿವನ ಬಳಿಗೆ ತಂದರು |
ಅದನ್ನು ಮಗನ ದೇಹಕ್ಕಿಟ್ಟು ಜೀವ ತಂದನು ದೇವನು |
ಜೀವ ತುಂಬಿದ ಕಂದ ತಂದೆಗೆ ವಂದನೆ ಗೈದನು |
ಸಂತಸದೇ ಮಗನ ತಬ್ಬಿ ಅವಗೆ ವರವ ಇಟ್ಟನು ||
ಇಂದಿನಿಂದ ಮೊದಲ ಪೂಜೆ ಎಂದು ನಿನಗೆ ಎಂದನು |
ಗಣಗಳಿಗೆ ನಾಯಕ ನೀ ಎಂದು ಶಿವನು ನುಡಿದನು |
ಅಂದಿನಿಂದ ಕಂದನಾದ ದೈವ ಗಣನಾಯಕ |
ಭಕ್ತರ ವಿಘ್ನಗಳನ್ನು ಅರಿಸುವ ವಿನಾಯಕ || 2 ||