ಮನೆ ಮನೆ ಮದ್ದು ಎಕ್ಕದ ಗಿಡ

ಎಕ್ಕದ ಗಿಡ

0

ದೇಶದ ಒಣ ಹವೆಯ ಎಲ್ಲೆಡೆ ತಾನಾಗಿ ಬೆಳೆಯುವ ಸಸ್ಯವಿದು. ಹಳೆ ಎಲೆ ಹಳದಿಯಗಿ ಉದುರುತ್ತದೆ. ಅಂಡಾ ಕಾರದ ತೊಟ್ಟು ರಹಿತ ಎದಿರು ಬದಿರೆಲೆ, ಎಲೆ ಮೇಲೆ ಬೂದಿ ಬಣ್ಣದ ಪುಡಿ. ಎಲೆ ಕಂಕುಳು ಹಾಗೂ ತುದಿ ರೆಂಬೆಯಲ್ಲಿ ಹೂ ದಂಡೆ. ನಕ್ಷತ್ತಾಕಾರದ  ಸುಂದರ ಹೂ. ಉಬ್ಬಿದ ಶಲಾಕಾಗ್ರ. ಮುಷ್ಟಿ ಮಡಚಿದಂತಿರುವ ಜೋಡಿಕಾಯಿ. ಕಾಯೊಳಗೆ ತುಂಬಾ ನವಿರು ರೇಷ್ಮೆಯ ಎಳೆಗಳಂತಹ ರಚನೆಯಿರುತ್ತದೆ. ಅದಕ್ಕಂಟಿದ ಚಪ್ಪಟೆ ಕಿರಿಬೀಜ, ಕಾಯಿ ಒಡೆದ ತರುವಾಯ ಗಾಳಿಯಲ್ಲಿ ತೇಲಾಡಬಲ್ಲ ಬೀಜಗಳು ಅನುಕೂಲ ನೆಲದಲ್ಲಿ ಮೊಳೆತು ಹೊಸ ಸಸಿ ಚಿಗುರುತ್ತದೆ. ಬಿಳಿ ಮತ್ತು ತಿಳಿನೀಲಿ ಬಣ್ಣ ಎರಡು ಜಾತಿಗಳನ್ನು ಗುರುತಿಸುವರು. ಬೇರು, ಚಿಗುರು ಎಲೆ, ಹೂಗಳನ್ನು ಮದ್ದಿಗಾಗಿ ಬಳಸುವರು. ಎಲೆ ಕಿತ್ತಾಗ ಒಸರುವ ಹಾಲನ್ನು ಸಹ ಸಂಗ್ರಹಿಸಿ ಬಳಸುವರು.

ಸೂರ್ಯಗ್ರಹಣವನ್ನು ಎಕ್ಕದ ಗಿಡವನ್ನು ಪೂಜಿಸುವ ಜನಪದ ಭಾವನೆಗಳ ಹಿಂದೆ ಮದ್ದಿನ ಬಳಕೆಯ ಸಾರ್ವ್ರತ್ರಿಕತೆ ಗೋಚರ, ರಸವೈದ್ಯದಲ್ಲಿ ರೋಗ ಮತ್ತು ಮುಪ್ಪು ಮುಂದೂಡಲು ಪಾದರಸ ಸಂಸ್ಕರಿಸಿ  ಯಥೇಚ್ಛವಾಗಿ ಬಳಸುತ್ತಾರೆ. ಪಾದರಸ ವಿಷ ನಿಜ. ಆದರೆ ಅದರ ೧೮ ಸಂಸ್ಕಾರಗಳ ತರುವಾಯ ಉಪಕಾರಿ ವಸ್ತುವಾಗಿ ಬಳಕೆಯಾಗುತ್ತದೆ. ಅಂತೆಯೇ ಎಕ್ಕದ ಗಿಡವೂ ಸಹ  ಅತ್ಯಂತ ಉಪಕಾರಿ ಎಂಬುವುದು ವೈದ್ಯರ, ಹಕೀಮರ ಅಬಿಪ್ರಾಯವಾಗಿದೆ. ಸೂರ್ಯನಂತೆ ಪ್ರಖರ ಗುಣವಿದ್ದುದರಿಂದ ಪೂಜಾರ್ಹ ಸಸ್ಯವಾಗಿದೆ.

ಯಕೃತ ಕಾಯಿಲೆಗೆ ಒಳ್ಳೆಯ ಮದ್ದಾಗಿದೆ. ಹಾಲು ತೀವ್ರವಾಗಿ ಭೇಧಿ ಮಾಡಿಸುತ್ತದೆ. ಚರ್ಮದ ಕಾಯಿಲೆಗಳಿಗೆ ರಾಮಬಾಣವಾಗಿದೆ. ಕೆಮ್ಮು ದಮ್ಮುಗಳ ಪರಿಹಾರಿ. ಅಜೀರ್ಣ, ಹೊಟ್ಟೆ ಉಬ್ಬರಕ್ಕೆ ಉತ್ತಮ ಮದ್ದು.

ಔಷಧೀಯ ಗುಣಗಳು :-

*ಹಲ್ಲುನೋವಿಗೆ ಉಪ್ಪಿನ ಸಂಗಡ ಅರೆದು ಹಲ್ಲು ನೋವಿನ ಜಾಗಕ್ಕೆ ಹಚ್ಚಿದರೆ ನೋವು ಪರಿಹಾರವಾಗುತ್ತದೆ.

*ಹಳೆಯ ಬೇರು ಕಿತ್ತು ತೆಗೆದು ಹಾಲು ಸುರಿಯುವುದು ನಿಲ್ಲುವವರೆಗೆ ಹದ ಬಿಸಿಲಲ್ಲಿ ಒಣಗಿಸಿ ಅನಂತರ ಪುಡಿ ಮಾಡಿರಿ . ಬಾಡಲಿಯಲ್ಲಿ ಶೇಖರಿಸಿ, ಒಂದೆರಡು ಗ್ರಾಂನಷ್ಟು, ಪುಡಿ ಮಾಡಿ, ನೆಕ್ಕಿದರೆ ತೀವ್ರ ವಾಂತಿ, ಕಫ ಪರಿಹಾರವಾಗುತ್ತದೆ.

*ಕಿವಿನೋವಿಗೆ ಚಿಗುರು ರಸ ಬಿಸಿಮಾಡಿ ಕಿವಿಗೆ ಒಂದೆರಡು ಹನಿ ಹಾಕಿದರೆ ಕಿವಿಗೆ ಒಂದೆರಡು ಹನಿ ಹಾಕಿದರೆ ಕಿವಿನೋವು ಮಾಯವಾಗುತ್ತದೆ.

*ಚಿಗುರೆಲೆ ಒಣಗಿಸಿ ಪುಡಿ  ಮಾಡಿರಿ. ಒಂದು ಗ್ರಾಂ ಪುಡಿ ನಿತ್ಯ ಮುಂಜಾನೆ ಸೇವಿಸಿರಿ. ಹಳೆಯ ತಲೆನೋವು, ನೆಗಡಿ ಸಂಬಂಧಿ, ತೊಂದರೆಗೆ ಇದು ರಾಮಬಾಣ.

*ಹೊಟ್ಟೆ ಉಬ್ಬರಿಸಿದ ಮಕ್ಕಳ ಉದರ ಭಾಗಕ್ಕೆ ಬಿಸಿ ಎಲೆಯ ಶಾಖ ಕೊಟ್ಟರೆ ಒಂದೆರಡು ಬಾರಿ ಮಲ ವಿಸರ್ಜನೆಯಾಗಿ ಮಗುವಿಗೆ ಆರಾಮವಾಗುತ್ತದೆ.

*ಜಲೋಧರ ಹೊಟ್ಟೆಯ ಪದರದಲ್ಲಿ ನೀರು ಸೇರಿದ್ದು ಕಾಯಿಲೆಗೆ, ನಿತ್ಯ ಭೇಧಿ ಮಾಡಿಸಲು ಎಕ್ಕದ ಹಾಲು ವೈದ್ಯರು ಹೇಳಿದಂತೆ ತೆಗೆದುಕೊಂಡರೆ ಹಿತಕರ.

*ಹಳೆಯ ಬೇರು ಕಿತ್ತು ತೆಗೆದು ಹಾಲು ಸುರಿಯುವುದು ನಿಲ್ಲುವವರೆಗೆ ಹದ ಬಿಸಿಲಲ್ಲಿ ಒಣಗಿಸಿ ಅನಂತರ ಪುಡಿ ಮಾಡಿ, ಬಾಟಲಿಯನ್ನು ಶೇಖರಿಸಿ, ಒಂದೆರಡು ಗ್ರಾಂನಷ್ಟು ಪುಡಿ ಮಾಡಿ, ಬಾಟಲಿಯನ್ನು ಶೇಖರಿಸಿ ಒಂದೆರಡು ಗ್ರಾಂ ನಷ್ಟು ಪುಡಿ ನೆಕ್ಕಿಸಿದರೆ ತ್ರೀವ್ರ ಪ್ರಕಾರದ ವಾಂತಿ ಮತ್ತು ಕಫವು ಗುಣವಾಗುತ್ತದೆ.

*ಹಳೆಯ ಜ್ವರ, ಮರುಕಳಿಸುವ ಮಲೇರಿಯಾದಲ್ಲಿ ಎಕ್ಕದ ಬೇರು ಪುಡಿ, ಒಂದೆರಡು ಗ್ರಾಂನಷ್ಟು ಒಂದು ಲೋಟ ಕುದಿಯುವ ನೀರು ಹಾಕಿ ಕದಡಿಸಿ, ತಣಿಸಿದ ನಂತರ ಕುಡಿಯುವುದರಿಂದ ಚೆನ್ನಾಗಿ ಬೆವರು ಬಂದು, ಜ್ವರವು ಪರಿಹಾರವಾಗುತ್ತದೆ.

ಹಿಂದಿನ ಲೇಖನಹೇಳುವೆ ಕಥೆ ಹೇಳುವೆ
ಮುಂದಿನ ಲೇಖನಉತ್ತಮ ಆರೋಗ್ಯ ಮತ್ತು ವ್ಯಾಯಾಮ