ಶರಣು ಸಿಧ್ಧಿ ವಿನಾಯಕ
ಶರಣು ವುದ್ಯ ಪ್ರದಾಯಕ ||
ಶರಣು ಪಾರ್ವತಿ ತನಯ ಮೂರುತಿ
ಶರಣು ಮೂಷಿಕ ವಾಹನ || 2 || || ಶರಣು ||
ನಿಟಿಲ ನೇತ್ರದ ದೇವಿ ಸುತನೆ
ನಾಗಭೂಷಣ ಪ್ರಿಯನೆ ||
ತಟಿಲ ತಾಂಕಿತ ಕೋಮಲಾಂಗನೆ |
ಕರ್ಣ ಕುಂಡಲ ದಾರನೆ || ಶರಣು ||
ಬಟ್ಟ ಮುತ್ತಿನ ಪದಕ ಹಾರನೆ
ಬಾಹು ಹಸ್ತ ಚತುಷ್ಟನೆ ||
ಇಟ್ಟ ತೊಡುಗೆಯ ಹೇಮ ಕಂಕಣ ||
ಪಾಶ ಅಂಕುಶ ದಾರನೆ || ಶರಣು ||
ಕುಕ್ಷಿ ಮಹಾ ಲಂಭೋದರನೆ
ಇಕ್ಷು ಚಾಪನ ಗೆಲಿದನೆ ||
ಪಕ್ಷಿ ವಾಹನ ಸಿರಿ ಪುರಂದರ ವಿಠಲನ
ನಿಜ ದಾಸನೆ || ಶರಣು ||