ದಾಸನಾದೆಯೋ ನೀ ದಾಸನಾದೆಯೋ
ಕನಕನೆಂಬ ದಾಸನಾಗಿ
ಕೃಷ್ಣನೊಲುಮೆಗೆ ಪಾತ್ರನಾಗಿ
ದಾಸನಾದೆಯೋ ನೀ ದಾಸನಾದೆಯೋ || ಪ
ಯಾರು ಇಲ್ಲದ ಸ್ಥಳವ ನೋಡಿ
ಬಾಳೆ ಹಣ್ಣು ತಿಂದು ಬನ್ನಿ ಎಂದು…
ನೀಡಿದರು ನಿನ್ನ ಗುರುಗಳಂದು
ಮಕ್ಕಳೆಲ್ಲ ತಿಂದು ಬಂದು || 1
ನೀನು ಮಾತ್ರ ತಿನ್ನದೆ ನಿಂದು
ದೇವನೊಬ್ಬ ಮೇಲೆ ಇರುವನೆಂದು.
ಹಣ್ಣು ತಿನ್ನದೆ ತಿರುಗಿ ಬಂದು
ದಿಟ್ಟತನದಿ ನುಡಿದೆ ಅಂದು || 2
ಜಾತಿಗೀತಿ ಮೀರಿ ನಿಂತೆ
ದಾಸರೊಳಗೆ ಸೇರಿ ಕುಳಿತೆ
ಕೃಷ್ಣನೊಲಿದ ನಿನ್ನ ಭಕುತಿಗೆ
ಮುಖ ತೋರಿದ ಖಿಂಡಿಯಲಿ ತಿರುಗೆ || 3
ಇಂದಿಗಾದರೋ ನಿನ್ನ ಹೆಸರಿದೆ
ಉಡುಪಿಯ ಕೃಷ್ಣನ ದಯದೆ
ಚಂದದಿಂದ ಆದಿ ಕೇಶವ ನಿಜದೆ
ಜಾಹ್ನವಿ ವಿಠ್ಠಲನ ಹೊಂದಿದೆ ||