ಮನೆ ಸುದ್ದಿ ಜಾಲ ರಾಷ್ಟ್ರಪಿತ ಗಾಂಧಿ ಹಾಗೂ ನೆಹರು ಮೊದಲ ಪ್ರಧಾನಿ ಎಂದು ಒಪ್ಪಲು ಧರ್ಮ ಸಂಸತ್ ನಿರಾಕರಣೆ

ರಾಷ್ಟ್ರಪಿತ ಗಾಂಧಿ ಹಾಗೂ ನೆಹರು ಮೊದಲ ಪ್ರಧಾನಿ ಎಂದು ಒಪ್ಪಲು ಧರ್ಮ ಸಂಸತ್ ನಿರಾಕರಣೆ

0

ಪ್ರಯಾಗರಾಜ್‌: ಮಹಾತ್ಮ ಗಾಂಧೀಜಿಯನ್ನು ‘ರಾಷ್ಟ್ರಪಿತ’ ಎಂದು, ಪಂಡಿತ್ ಜವಾಹರಲಾಲ್ ನೆಹರು ಅವರನ್ನು ದೇಶದ ಮೊದಲ ಪ್ರಧಾನಿ ಎಂದು ಒಪ್ಪಲು ಧರ್ಮ ಸಂಸತ್ ನಿರಾಕರಿಸಿದೆ.

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ‘ಧರ್ಮ ಸಂಸತ್‌’ ನಡೆಯುತ್ತಿದ್ದು, ಭಾರತವನ್ನು ‘ಹಿಂದೂ ರಾಷ್ಟ್ರ’ ಮಾಡಲು ಕರೆ ನೀಡಲಾಗಿದ್ದು, ಇದೇ ವೇಳೆ ಈ ನಿರ್ಣಯ ಕೈಗೊಳ್ಳಲಾಗಿದೆ.

ಸುಮೇರು ಪೀಠದ ಶಂಕರಾಚಾರ್ಯ ಸ್ವಾಮಿ, ನರೇಂದ್ರಾನಂದ ಸರಸ್ವತಿ ಮತ್ತಿತರರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಮೂರು ನಿರ್ಣಯಗಳನ್ನು ಅಂಗೀಕರಿಸಲಾಗಿದೆ.

ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸುವುದು, ಹರಿದ್ವಾರ ಧರ್ಮ ಸಂಸತ್‌ನಲ್ಲಿ ಧ್ವೇಷ ಭಾಷಣ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಜಿತೇಂದ್ರ ನಾರಾಯಣ್ ತ್ಯಾಗಿ ಅಲಿಯಾಸ್ ವಸೀಂ ರಿಜ್ವಿ ಅವರನ್ನು ಬಿಡುಗಡೆ ಮಾಡುವುದು, ಮತಾಂತರದಲ್ಲಿ ತೊಡಗಿರುವವರಿಗೆ ಮರಣದಂಡನೆ ವಿಧಿಸಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು.

ರಾಷ್ಟ್ರಪುತ್ರ ಆಗಿರಬಹುದೇ ಹೊರತು ರಾಷ್ಟ್ರಪಿತನಲ್ಲ:

‘ಭಾರತದಂತಹ ದೇಶದಲ್ಲಿ ರಾಷ್ಟ್ರಪುತ್ರ (ರಾಷ್ಟ್ರದ ಮಗ) ಆಗಿರಬಹುದೇ ಹೊರತು, ಯಾರೂ ‘ರಾಷ್ಟ್ರಪಿತ’ ಆಗಲಾರರು’ ಎಂದು ನರೇಂದ್ರಾನಂದ ಸರಸ್ವತಿ ತಮ್ಮ ಭಾಷಣದಲ್ಲಿ ಹೇಳಿದರು.‘15 ದೇಶಗಳ ಬೆಂಬಲ’ ಹೊಂದಿದ್ದ ಸುಭಾಷ್ ಚಂದ್ರ ಬೋಸ್ ಅವರನ್ನು ದೇಶದ ಮೊದಲ ಪ್ರಧಾನಿ ಎಂದು ಘೋಷಿಸಬೇಕು. ದೇಶವು ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ ಬೋಸ್ ಅದಾಗಲೇ ಭಾರತದ ಪ್ರಧಾನಿಯಾಗಿದ್ದರು’ ಎಂದು ಅವರು ಪ್ರತಿಪಾದಿಸಿದರು.

ನರಸಿಂಹಾನಂದ ಮತ್ತು ತ್ಯಾಗಿ ಅವರನ್ನು ಬಿಡುಗಡೆ ಮಾಡದಿದ್ದಲ್ಲಿ ರಾಷ್ಟ್ರವ್ಯಾಪಿ ಹೋರಾಟ ನಡೆಸುವುದಾಗಿ ಧರ್ಮ ಸಂಸತ್‌ನಲ್ಲಿ ಭಾಗವಹಿಸಿದ್ದ ಧರ್ಮಗುರುಗಳು ಆಗ್ರಹಿಸಿದರು.

ಹಿಂದಿನ ಲೇಖನಆಸ್ಟ್ರೇಲಿಯಾ ಓಪನ್: 21ನೇ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ರಾಫೆಲ್ ನಡಾಲ್
ಮುಂದಿನ ಲೇಖನಕಾನ್ಪುರದಲ್ಲಿ ಸರಣಿ ರಸ್ತೆ ಅಪಘಾತ; 6 ಮಂದಿ ಸಾವು