ಮನೆ ದೇವರ ನಾಮ ಯಾಜ್ಞವಲ್ಕ್ಯ  ಗುರು

ಯಾಜ್ಞವಲ್ಕ್ಯ  ಗುರು

0

ಬಾರೋ ಯಾಜ್ಞವಲ್ಕ್ಯ ಗುರುವೆ

ನೀ ದಯಮಾಡಿ ಬಾರೋ ಪ್ರಭುವೆ || ಪ

ವೈಶಂಪಾಯನ ಗುರುವಿನ ಕೋಪಕೆ ಗುರಿಯಾದೆ

ಹಟ ಬಿಡದೆ ಬಾಸ್ಕಲ್ ಮುನಿಯ ಸೇವಿಸಿದೆ

ಗಾಯತ್ರಿ ಮಂತ್ರದಿ ಅಊರ್ಯನಾಹ್ವಾನಿಸಿ

ಶುಕ್ಲ ಯಜುರ್ವೇದವೆಂಬ ಉದ್ ಗ್ರಂಥ ರಚಿಸಿ

ಬಾರೋ ಯಾಜ್ಞವಲ್ಕ್ಯ ಗುರುವೆ || 1

ಕಾತ್ಯಾಯಿನಿಯ ಕನ್ಯಾಸರೆ ಬಿಡಿಸಿದೆ

ನಿನ್ನವಳಾಗಲು ಬಯಸಿದ ಮೈತ್ರೆಯಿಯನು ವರೆಸಿದೆ

ಜನಕ ಮಹಾರಾಜರು ನಿನ್ನ ಶಿಷ್ಯನು

ಪಂದ್ಯ ಪೂರ್ವದಲಿ ಬಯಸಿ ಹಸುಗಳನು

ಬಾರೋ ಯಾಜ್ಞವಲ್ಕ್ಯ ಗುರುವೆ || 2

ಶಿಷ್ಯೆ ಗಾರ್ಗಿ ಚತುರತನದಿ ನಿಮ್ಮನು ಪ್ರಶ್ನಿಸೆ

ಇನಿತು ಬೇಸರಿಸದೆ ಅವಳಿಗುತ್ತರಿಸಿದೆ

ಧರೆಯೋಳು ಮಹರ್ಷಿ ನೀನಾಗಿ ಮೆರೆದೆ

ಜಾಹ್ನವಿ ವಿಠ್ಠಲನ ಸ್ಮರಿಸುತ ಬಾಳಿದೆ

ಬಾರೋ ಯಾಜ್ಞವಲ್ಕ್ಯ ಗುರುವೆ || 3