ಮನೆ ಅಪರಾಧ ದೇವಾಲಯಗಳಲ್ಲಿ ಕಳವು:ಇಬ್ಬರು ಆರೋಪಿಗಳ ಬಂಧನ

ದೇವಾಲಯಗಳಲ್ಲಿ ಕಳವು:ಇಬ್ಬರು ಆರೋಪಿಗಳ ಬಂಧನ

0

ಮದ್ದೂರು: ತಾಲೂಕಿನ ವಿವಿಧ ಗ್ರಾಮಗಳ ದೇವಾಲಯಗಳಲ್ಲಿ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಸಗರಹಳ್ಳಿ ಪೊಲೀಸರು ಬಂಧಿಸಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

Join Our Whatsapp Group

ತಾಲೂಕಿನ ಚುಂಚೇಗೌಡನದೊಡ್ಡಿ ಗ್ರಾಮದ ದೇವಾಲಯದಲ್ಲಿ ಕಳೆದ ಹಲವು ದಿನಗಳ ಹಿಂದೆ ಕಳವು ಮಾಡಿದ್ದ ಟಿ.ನರಸಿಪುರ ಮೂಲದ ಎನ್. ಮಹೇಶ್, ಎಂ. ಗೋವಿಂದನಾಯಕ ಬಂಧಿತ ಆರೋಪಿಗಳಾಗಿದ್ದು ದೇವರ ವಿಗ್ರಹಮೂರ್ತಿಗೆ ಅಳವಡಿಸಿದ್ದ ಬೆಳ್ಳಿಯ ಮುಖವಾಡ, ಚಿನ್ನದ ಕಾಸುಗಳು, ತಾಳಿ ಇನ್ನಿತರ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.

ಈ ಸಂಬಂಧ ಚುಂಚೇಗೌಡನದೊಡ್ಡಿ ಗ್ರಾಮದ ಬಿ.ಎಲ್.ನಾಗರಾಜು ಎಂಬುವರು ನೀಡಿದ್ದ ದೂರಿನ ಮೇರೆಗೆ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಸಿಕೊಂಡು ತನಿಖೆ ಕೈಗೊಂಡು ಆರೋಪಿಗಳ ಪತ್ತೆಗೆ ಕ್ರಮವಹಿಸಿದ್ದರು.

ಟಿ.ನರಸೀಪುರ ಗ್ರಾಮದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ ವೇಳೆ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳು ಬೆಸಗರಹಳ್ಳಿ, ಬನ್ನೂರು, ಮಳವಳ್ಳಿ ಗ್ರಾಮಾಂತರ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ದೇವಾಲಯಗಳಲ್ಲಿ  ಕಳವು ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ.

ಆರೋಪಿಗಳಿಂದ ಕಳುವಾಗಿದ್ದ ೧೦೦ ಗ್ರಾಂ. ಚಿನ್ನದ ಆಭರಣಗಳು, ೪ ಕೆ.ಜಿ.ಗೂ ಹೆಚ್ಚು ಬೆಳ್ಳಿ ಪದಾರ್ಥಗಳು, ೨೧ ಸಾವಿರ ರೂ. ನಗದು ಹಾಗೂ ಕಳವು ಮಾಡಲು ಬಳಸುತ್ತಿದ್ದ ೨ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಬಂಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿ. ತಿಮ್ಮಯ್ಯ, ಮಳವಳ್ಳಿ ಡಿವೈಎಸ್‌ಪಿ ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ಹಾಗೂ ಬೆಸಗರಹಳ್ಳಿ ಪಿಎಸ್‌ಐ ಮಲ್ಲಪ್ಪ ಸಂಗಪ್ಪ ಕುಂಬಾರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಆರೋಪಿಗಳನ್ನು ಬಂಧಿಸಿರುವ ಬೆಸಗರಹಳ್ಳಿ ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

 

 

 

 

ಹಿಂದಿನ ಲೇಖನಸಿಟಿಜನ್ ನ್ಯೂಸ್ ಹಾಗೂ ಪತ್ರಿಕೆಯ ಮಾಲೀಕ ಮತ್ತು ಸಂಪಾದಕ ರಂಜಿತ್ ನಿಧನ
ಮುಂದಿನ ಲೇಖನಯಾಜ್ಞವಲ್ಕ್ಯ  ಗುರು